ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ 11 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನವಾದ ಗುರುವಾರ ಹೊನ್ನಾಟ ಕಳೆಗಟ್ಟಿತ್ತು. ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಜಯಘೋಷದೊಂದಿಗೆ ಭಂಡಾರ ಓಕುಳಿ ಆಡಿ ಭಕ್ತಿ ಮೆರೆದರು.

ಭಕ್ತರ ಹೆಗಲ ಮೇಲೆ ಕುಳಿತಿದ್ದ ದೇವಿ ಪ್ರತಿಮೆ ಓಣಿ, ಓಣಿಗಳಲ್ಲಿ ಸಂಚರಿಸಿತು. ಮನೆ ಎದುರು ಆಗಮಿಸಿದಾಗ ದೇವಿಗೆ ಆರತಿ ಎತ್ತಿ ಭಕ್ತಿ ಸೇವೆ ಸಮರ್ಪಿಸಿದರು. ದೂರದೂರುಗಳಿಂದ ಭಕ್ತರು ಬಂದಿದ್ದರು.

‘ಭಂಡಾರದೊಡತಿ’ ಜಾತ್ರಾ ಮಹೋತ್ಸವ ಸಮಿತಿಯೇ ಭಂಡಾರ ಪೂರೈಕೆ ಮಾಡುತ್ತಿದ್ದಾರೆ. ಮುಂಜಾನೆ ಕಲಗೌಡರ ಮನೆ ಎದುರು ದೇವಿ ವಾಸ್ತವ್ಯ ಮಾಡಿದರೆ, ಸಂಜೆ ಪತ್ತಾರ ಮನೆಯ ಮುಂದೆ ವಾಸ್ತವ್ಯ ಮಾಡಿದ್ದು, ಎರಡೂ ಕಡೆಗಳಲ್ಲಿ ಭಕ್ತರು ದೇವಿಗೆ ಉಡಿ ತುಂಬಿ ಹರಕೆ ತೀರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.