ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಆನೆ ತಜ್ಞ ಅಜಯ್ ದೇಸಾಯಿ ನಿಧನ

Last Updated 20 ನವೆಂಬರ್ 2020, 12:30 IST
ಅಕ್ಷರ ಗಾತ್ರ

ಬೆಳಗಾವಿ: ಆನೆ ತಜ್ಞ ಹಾಗೂ ವನ್ಯಜೀವಿ ನಿರ್ವಹಣಾ ಸಲಹೆಗಾರರಾಗಿದ್ದ ಅಜಯ್‌ ದೇಸಾಯಿ (62) ಇಲ್ಲಿನ ಕ್ಯಾಂಪ್ ಪ್ರದೇಶದ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು, ಸಹೋದರಿ ಹಾಗೂ ಡಾ.ಅರವಿಂದ ದೇಸಾಯಿ ಸೇರಿದಂತೆ ಇಬ್ಬರು ಸಹೋದರರು ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು. ಅವರು ಮೂಲತಃ ಬಾಗಲಕೋಟೆ ಜಿಲ್ಲೆ ತಾಲ್ಲೂಕಿನ ಕೊಣ್ಣೂರಿನವರು.

ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ‌ಬಸವರಾಜ ಪಾಟೀಲ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮ ದರ್ಶನ ಪಡೆದು, ಸಮವಸ್ತ್ರ ಗೌರವ ಸಲ್ಲಿಸಿದರು.

ಪರಿಚಯ: ವನ್ಯಜೀವಿ ಜೀವಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದರು. ಡಬ್ಲ್ಯುಡಬ್ಲ್ಯುಎಫ್‌ (ವರ್ಲ್ಡ್‌ವೈಡ್ ಫಂಡ್ ಫಾರ್ ನೇಚರ್‌) ಸದಸ್ಯರಾಗಿದ್ದ ಅವರು, ಆನೆಗಳ ಕುರಿತು ಹಲವು ಕಡೆಗಳಲ್ಲಿ ಉಪನ್ಯಾಸ ನೀಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ವನ್ಯಜೀವಿಗಳ ನಿರ್ವಹಣೆ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಅನುಭವ ಅವರದು. 50ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ, ತಾಂತ್ರಿಕ ವರದಿ, ಯೋಜನಾ ವರದಿಗಳನ್ನು ಮಂಡಿಸಿದ್ದರು. ಐಸಿಯುಎನ್‌ (ಇಂಟರ್‌ನ್ಯಾಷನಲ್‌ ಯೂನಿಯನ್ ಫಾರ್‌ ಕನ್ಸರ್ವೇಷನ್ ಆಫ್‌ ನೇಚರ್) ಹಾಗೂ ಏಷ್ಯಾ ಆನೆಗಳ ತಜ್ಞರ ಸಮೂಹದ ಎಸ್ಎಸ್‌ಸಿ (ಸ್ಪೀಸಿಸ್ ಸರ್ವೈವಲ್‌ ಕಮಿಷನ್)ಯಲ್ಲೂ ಕಾರ್ಯನಿರ್ವಹಿದ್ದರು. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿದ್ದರು. ವಿವಿಧೆಡೆ ಆನೆಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

2005ರಿಂದ 2012ರವರೆಗೆ ಪ್ರಾಜೆಕ್ಟ್‌ ಆನೆ ಚಾಲನಾ ಸಮಿತಿಯ ಸದಸ್ಯರಾಗಿದ್ದರು. ಆನೆ ಯೋಜನೆ ಕಾರ್ಯಪಡೆ ಸದಸ್ಯರಾಗಿ ಶ್ರೀಲಂಕಾ, ಭೂತಾನ್, ನೇಪಾಳ, ಇಂಡೊನೇಷ್ಯಾ, ಕಾಂಬೋಡಿಯಾ, ಲಾವೋಸ್ ಹಾಗೂ ಮಲೇಷ್ಯಾ ಮೊದಲಾದ ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಡಬ್ಲ್ಯುಡಬ್ಲ್ಯುಎಫ್‌, ಸಂಯುಕ್ತ ರಾಷ್ಟ್ರಗಳು, ಎಫ್‌ಎಒ (ಆಹಾರ ಮತ್ತು ಕೃಷಿ ಸಂಸ್ಥೆ), ಅರಣ್ಯ ಇಲಾಖೆ ಹಾಗೂ ಬಾಂಬೆಯ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಸಲಹೆಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT