ಹುಕ್ಕೇರಿ: ‘ಹಿರಿಯರನ್ನು ಗೌರವದಿಂದ ಕಾಣಬೇಕು. ಅವರ ಅನುಭವ ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ’ ಎಂದು ಹಡಪದ ಸಮಾಜದ ಹಿರಿಯ ಮುಖಂಡ ರಾಮಚಂದ್ರ ನಣದಿ ಹೇಳಿದರು.

ಮಂಗಳವಾರ ಪಟ್ಟಣದ ಹೊರವಲಯದಲ್ಲಿ ಸಮಾಜದ ವತಿಯಿಂದ ಖರೀದಿಸಿದ ₹ 10 ಲಕ್ಷ ಮೌಲ್ಯದ ‘ಹಡಪದ ಸಮಾಜದ ರುದ್ರಭೂಮಿ ಪೂಜಾ’ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ಮುಖಂಡ ಆನಂದ ಕುರಲಿ ಮಾತನಾಡಿ, ‘ಹಡಪದ ಸಮಾಜ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಹಿರಿಯರು, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮುತುವರ್ಜಿ ವಹಿಸಬೇಕು’ ಎಂದು ಮನವಿ ಮಾಡಿದರು.

ಮೋಹನ್ ಹುಲ್ಲೋಳಿ ಮಾತನಾಡಿದರು. ಹಡಪದ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಕುರಲಿ, ಸಮಾಜದ ಹಿರಿಯ ಮುಖಂಡ ರಾಮಚಂದ್ರ ನಣದಿ, ಬಸವರಾಜ್ ನಾವಿ, ವಿರೂಪಾಕ್ಷಿ ನಾವಿ, ವಿಠ್ಠಲ್ ಹುಲ್ಲೋಳಿ, ರಮೇಶ್ ನಾವಿ, ರವಿ ನಣದಿ, ಶಂಕರ್ ನಾವಿ, ಸಮಾಜದ ಮಹಿಳಾ ಸಂಘಟನೆಯ ಅನ್ನಪೂರ್ಣ ನಾವಿ, ಮಹಾದೇವಿ ನಾವಿ, ಕಸ್ತೂರಿ ನಾವಿ, ಮಂಗಲ್ ಕುರ್ಲಿ, ಶಾಂತವ್ವ ಕುರ್ಲಿ, ಬಾಳವ್ವ ಕುರ್ಲಿ, ಶಾರದಾ ನಾವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.