ಬೆಳಗಾವಿ: ಬೆಳಗಾವಿ ನಗರ ಹಾಗೂ ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದಲ್ಲಿ ಶನಿವಾರ, ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ನಗರದ ಬೃಹತ್ ಮೂರ್ತಿಗಳನ್ನು ವಿಸರ್ಜನೆ ಮಾಡಲು ಸಿದ್ಧಪಡಿಸಿದ ಜಕ್ಕೇರಿ ಹೊಂಡದಲ್ಲಿ ಬಿದ್ದ ವಡ್ಡರವಾಡಿ ನಿವಾಸಿ ರಾಹುಲ್ ಬ್ಯಾಕವಾಡಕರ್ (33) ಮೃತಪಟ್ಟರು. ಮೂರ್ತಿಯ ಜತೆಗೆ ನೀರಿಗೆ ಬಿದ್ದ ಅವರನ್ನು ಜತೆಯಲ್ಲಿದ್ದವರು ಎತ್ತಿ ಹೊರಕ್ಕೆ ತಂದರು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದರು ಎಂದು ತಿಳಿಸಲಾಗಿದೆ.

ಇನ್ನೊಂದೆಡೆ, ನಂದಗಡ ಗ್ರಾಮದಲ್ಲಿ ಮೂರ್ತಿ ವಿಸರ್ಜನೆಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಯುವಕನ ಹೆಸರು, ಊರು ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
.ಶಿಗ್ಗಾವಿ | ಡಿಜೆ ಇಲ್ಲದೆ ವಿಸರ್ಜನೆ ಇಲ್ಲ: ಗಣೇಶ ಮಂಡಳಿ ಸಭೆಯಲ್ಲಿ ನಿರ್ಧಾರ.ಕೊಪ್ಪಳ | ಮುಸ್ಲಿಂರಿಂದ ಗಣೇಶ ಮೂರ್ತಿ ಪೂಜೆ: ಹಿಂದೂಗಳಿಂದ ಈದ್ಗೆ ಅನ್ನಸಂತರ್ಪಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.