ಬೆಳಗಾವಿ: ವಾಯವ್ಯ ಪದವೀಧರರ ಕ್ಷೇತ್ರದಿಂದ 2ನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿಧಾನಪರಿಷತ್ ಹಾಲಿ ಸದಸ್ಯ ಹಣಮಂತ ನಿರಾಣಿ ಅವರು ಆಸ್ತಿಯಷ್ಟೆ ಸಾಲವನ್ನೂ ಹೊಂದಿದ್ದಾರೆ.

ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆಸ್ತಿ ವಿವರ ನೀಡಿದ್ದಾರೆ. 2020–21ನೇ ಸಾಲಿನಲ್ಲಿ ₹ 27.41 ಲಕ್ಷ ಆದಾಯ ತೋರಿಸಿದ್ದಾರೆ. ಅವರು ₹ 18.38 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದರೆ, ಪತ್ನಿ ಶೋಭಾ ಹೆಸರಿನಲ್ಲಿ ₹ 10.06 ಕೋಟಿ ಬೆಲೆ ಬಾಳುವ ಚರಾಸ್ತಿ ಇದೆ. ಪುತ್ರಿ ಪೂಜಾ ₹2.09 ಲಕ್ಷ ಮತ್ತು ಮಗ ಪ್ರಜ್ವಲ್ ₹ 58ಸಾವಿರ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಹಣಮಂತ ಅವರ ಹೆಸರಿನಲ್ಲಿ ₹ 81.02 ಲಕ್ಷದ ಸ್ಥಿರಾಸ್ತಿ, ಪತ್ನಿ ಹೆಸರಲ್ಲಿ ₹ 21.30 ಲಕ್ಷ ಸ್ಥಿರಾಸ್ತಿ ಇದೆ. ನಿರಾಣಿ ಬಳಿ 7.51 ಲಕ್ಷ ಮೌಲ್ಯದ ಬಂಗಾರದ ಆಭರಣ, ₹ 3 ಲಕ್ಷ ಮೌಲ್ಯದ ಬೆಳ್ಳಿ, ಪತ್ನಿಯ ಬಳಿ ₹ 29.70 ಲಕ್ಷ ಬೆಲೆಯ ಬಂಗಾರ, ₹ 10.58 ಲಕ್ಷ ಮೌಲ್ಯದ ವಜ್ರಾಭರಣ, ₹ 3 ಲಕ್ಷ ಬೆಲೆಯ ಬೆಳ್ಳಿ ಇದೆ. ಪುತ್ರಿ ಬಳಿ ₹ 2.07 ಲಕ್ಷ ಬೆಲೆಯ ಬಂಗಾರ ಹಾಗೂ ಪುತ್ರನ ಬಳಿ ₹ 77,760 ಮೌಲ್ಯದ ಬಂಗಾರದ ಆಭರಣವಿದೆ. ನಿರಾಣಿ ಬಳಿ ₹ 2.14 ಲಕ್ಷವಿದೆ. ಪತ್ನಿ ಬಳಿ ₹ 3.36 ಲಕ್ಷ ನಗದಿ ಇದೆ ಎಂದು ಮಾಹಿತಿ ನೀಡಿದ್ದಾರೆ.

ನಿರಾಣಿ ಅವರು ವಿವಿಧ ಬ್ಯಾಂಕ್ಗಳಲ್ಲಿ ₹ 1.39 ಕೋಟಿ ಠೇವಣಿ ಇಟ್ಟಿದ್ದಾರೆ. ₹ 16.42 ಕೋಟಿ ಮೊತ್ತವನ್ನು ವಿವಿಧ ಬಾಂಡ್ ಮತ್ತು ಷೇರುಗಳಲ್ಲಿ ತೊಡಗಿಸಿದ್ದಾರೆ. ಪತ್ನಿಯ ಹೆಸರಲ್ಲಿ ₹ 9.58 ಕೋಟಿ ಮೊತ್ತದ ಬಾಂಡ್ ಮತ್ತು ಷೇರುಗಳಿವೆ. ನಿರಾಣಿ ಹೆಸರಿನಲ್ಲಿ ₹ 27.33 ಲಕ್ಷ ಬೆಲೆಯ 2 ಕಾರ್ಗಳಿವೆ. ವೈಯಕ್ತಿಕವಾಗಿ ₹ 14.28 ಲಕ್ಷ, ವಿವಿಧ ಬ್ಯಾಂಕ್ಗಳಿಂದ ₹ 20.14 ಕೋಟಿ ಸಾಲವಿದೆ. ಪತ್ನಿ ಹೆಸರಿನಲ್ಲಿ ₹ 10.20 ಕೋಟಿ ಸಾಲವಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.