ಮಂಗಳವಾರ, ಫೆಬ್ರವರಿ 7, 2023
27 °C

ಮಹಾರಾಷ್ಟ್ರ: ಕರ್ನಾಟಕ ಬಸ್ಸಿಗೆ ಕಲ್ಲು ತೂರಾಟ, ಮೀರಜ್ ಮಾರ್ಗದಲ್ಲಿ ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪುಣೆಯಿಂದ ಅಥಣಿಗೆ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಮಹಾರಾಷ್ಟ್ರದ ಗಡಿಯಲ್ಲಿ ಶುಕ್ರವಾರ ರಾತ್ರಿ, ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಬಸ್ಸಿನ ಮುಂಭಾಗದ ಗಾಜು ಹಾಗೂ ಎರಡು ಕಿಟಕಿ ಒಡೆದಿವೆ.

ಬಸ್ ಸಂಚರಿಸುವ ವೇಳೆಯೇ ಕತ್ತಲಲ್ಲಿ ರಸ್ತೆಗೆ ಅಡ್ಡಬಂದ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾದರು. ಬಸ್ಸಿನ ಚಾಲಕ ಕುಳಿತಿದ್ದ ಭಾಗದಲ್ಲಿ ಗಾಜು ಒಡೆಯಿತು. ಆದರೂ ಚಾಲಕ ವಾಹನ ನಿಲ್ಲಿಸದೇ ಸುರಕ್ಷಿತವಾಗಿ ದಾಟಿಸಿದರು.

ಮೀರಜ್ ಮಾರ್ಗವಾಗಿ ಸಂಚರಿಸುವ ಕರ್ನಾಟಕದ ಎಲ್ಲ ಬಸ್ ಸಂಚಾರವನ್ನು ಶನಿವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ಕಾಗವಾಡ ಮಾರ್ಗವಾಗಿ ಪ್ರತಿ ದಿನ ಸಾವಿರಾರು ಪ್ರಯಾಣಿಕರು ಮಹಾರಾಷ್ಟ್ರಕ್ಕೆ ತೆರಳುತ್ತಾರೆ. ಕಿಡಿಗೇಡಿಗಳು ಇದೇ ಬಸ್ಸುಗಳನ್ನು ಗರಿಯಾಗಿಸಿ ಗಲಾಟೆ ಮುಂದುವರಿಸಿದ್ದಾರೆ.

ರಾಜ್ಯದ ಬಸ್ಸುಗಳ ಮೇಲೆ  ಮಹಾರಾಷ್ಟ್ರದಲ್ಲಿ ದಾಳಿ ಮುಂದುವರಿದ ಕಾರಣ, ಈ ಮಾರ್ಗದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು