ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು: 3823 ಮಕ್ಕಳಿಗೆ ಪೋಲಿಯೊ ಲಸಿಕೆ

Published 3 ಮಾರ್ಚ್ 2024, 15:44 IST
Last Updated 3 ಮಾರ್ಚ್ 2024, 15:44 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಪಟ್ಟಣದ ವಿವಿಧ ಕಡೆಗಳಲ್ಲಿ ಸ್ಥಾಪಿಸಲಾಗಿದ್ದ 15 ಕೇಂದ್ರಗಳಲ್ಲಿ ಭಾನುವಾರ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಯಿತು. ಐದು ವರ್ಷದೊಳಗಿನ 3973ರಲ್ಲಿ 3823 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮುಂಜಾನೆ ಇಲ್ಲಿಯ ಗೊಂಬಿಗುಡಿಯಲ್ಲಿ ತೆರೆಯಲಾಗಿದ್ದ ಕೇಂದ್ರದಲ್ಲಿ ವೈದ್ಯೆ ಅನ್ನಪೂರ್ಣ ಅಂಗಡಿ ಅಭಿಯಾನಕ್ಕೆ ಚಾಲನೆ ನೀಡಿದರು.

ಕೇಂದ್ರಕ್ಕೆ ಬಂದಿದ್ದ ಮೊದಲ ಮಗುವಿಗೆ ವೈದ್ಯಾಧಿಕಾರಿ ಇಮಾತ್ ರಾಜಗೋಳಿ ಪೋಲಿಯೊ ಹನಿ ಹಾಕಿದರು. ಸಿಬ್ಬಂದಿ ಮಹೇಶ, ರಮೇಜಾ, ಶಿವಪ್ಪ ಬೆಣಚನಮರಡಿ, ಮಂಜುಳಾ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಾದ ಚನ್ನಮ್ಮ ಹಿರೇಮಠ, ಯಶೋಧಾ, ಶಹನಾಜಾ, ನೀಲಾಂಬಿಕಾ, ಕಾಂಚನಾ ರಾವಳ, ಹಿರಿಯರಾದ ಮಲ್ಲಿಕಾರ್ಜುನ ದೊಡಮನಿ, ಲಲಿತಾ ಅಕ್ಕಿ ಇದ್ದರು.

ಸೋಮವಾರ ಮತ್ತು ಮಂಗಳವಾರವೂ ಮನೆ, ಮನೆಗೆ ತೆರಳಿ ಉಳಿದ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಮಹೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT