ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳ ಸಂಪರ್ಕದಿಂದ ಶಾಂತಿ, ನೆಮ್ಮದಿ ಸಾಧ್ಯ: ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ

ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ
Published 24 ಅಕ್ಟೋಬರ್ 2023, 13:58 IST
Last Updated 24 ಅಕ್ಟೋಬರ್ 2023, 13:58 IST
ಅಕ್ಷರ ಗಾತ್ರ

ಹುಕ್ಕೇರಿ: ಮಠ ಮಂದಿರಗಳ ಸಂಪರ್ಕ ಹೊಂದಿದವರು, ಜೀವನದಲ್ಲಿ ಎಷ್ಟೆ ಒತ್ತಡವಿದ್ದರೂ, ಸಮಾಧಾನ ಮತ್ತು ಶಾಂತಚಿತ್ತದಿಂದ ಜೀವನ ಸಾಗಿಸಬಲ್ಲರು ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.

ಅವರು ಸ್ಥಳೀಯ ಹಿರೇಮಠದ ‘ಭಾವೈಕ್ಯ ದಸರಾ ಉತ್ಸವ’ದಲ್ಲಿ ಪಾಲ್ಗೊಂಡು ಮಾತನಾಡಿದರು. ಗುರುಗಳ ಮಾರ್ಗದರ್ಶನದಿಂದ ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯ ಎಂದ ಅವರು, ಯುವ ಪೀಳಿಗೆ ಆಧ್ಯಾತ್ಮದತ್ತ ಚಿತ್ತ ಹರಿಸಲು ಸಲಹೆ ನೀಡಿದರು. ‘ಅಮೃತ ವರ್ಷನಿ’ ಮತ್ತು ‘ ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಟಿ ರಜನಿ ಸಭೆ ಉದ್ಧೇಶಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ ‘ ಜನರಿಗೆ ಸಮುದಾಯದ ಸ್ವಚ್ಛತಾ ಅಭಿಯಾನದ’ ತಿಳಿವಳಿಕೆ ಮೂಡಿಸಬೇಕಾಗಿದೆ ಎಂದರು. ತನ್ನಿಮಿತ್ತ ತಾವು ಕೈಗೊಂಡ ಕಾರ್ಯದ ಬಗ್ಗೆ ವಿವರಿಸಿದರು.

ಮಹಾವೀರ ಉದ್ಯೋಗ ಸಮೂಹ ಚೇರಮನ್ ಮಹಾವೀರ ನಿಲಜಗಿ, ರೀರ್ಡ್ಸ್ ಸಂಸ್ಥೆಯ ಅಧ್ಯಕ್ಷ ಅಶೋಕ ಪಾಟೀಲ್, ಸಿಬಿಎಸ್ಇ ಸ್ಕೂಲ್ ಪ್ರಾಚಾರ್ಯ ಅನಿಲ್ ಪಾಟೀಲ್, ಜೈನ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಾಹುಬಲಿ ನಾಗನೂರಿ, ಹನ್ನೊಂದು ಜಮಾತ್ ಅಧ್ಯಕ್ಷ ಇರ್ಷಾದ್ ಮೊಕಾಶಿ, ಹಡಪದ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಕುರಲಿ, ನಿವೃತ್ತ ಮುಖ್ಯ ಶಿಕ್ಷಕ ಸಿ.ಡಿ.ಪಾಟೀಲ್, ಹಿರಾ ಶುಗರ್ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಬ್ರಾಹ್ಮಣ ಸಮಾಜದ ಮುಖಂಡ ಗುರುರಾಜ ಕುಲಕರ್ಣಿ ಅತಿಥಿಗಳಾಗಿದ್ದರು.

ನಿರಾಣಿ ಉದ್ಯೋಗ ಸಮೂಹದ ಸಿಇಒ ಸಂಗಮೇಶ್ ನಿರಾಣಿ, ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ, ಎಚ್.ಎಲ್.ಪೂಜಾರ, ಮುಖಂಡರಾದ ಶೀತಲ್ ಬ್ಯಾಳಿ, ಚನ್ನಪ್ಪ ಗಜಬರ್, ಸುರೇಶ್ ಜಿನರಾಳಿ, ಶಿವಾನಂದ ಜಿರಲಿ ಸೇರಿದಂತೆ ನೂರಾರು ಭಕ್ತರು ಇದ್ದರು.

ಇದಕ್ಕೂ ಮೊದಲು ಅಮೀನಗಡದ ಮಾತೋಶ್ರೀ ಪಾರ್ವತಿ ಚೊಳಚಗುಡ್ಡ ಅವರಿಂದ ಆಧ್ಯಾತ್ಮ ಪ್ರವಚನ ಜರುಗಿತು.ಶಿಕ್ಷಕ ಸಿ.ಎಂ.ದರಬಾರೆ ಸ್ವಾಗತಿಸಿ ವಂದಿಸಿದರು.

ಹುಕ್ಕೇರಿ ಹಿರೇಮಠದ ‘ಭಾವೈಕ್ಯ ದಸರಾ’ದಲ್ಲಿ ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಅವರನ್ನು ಚಂದ್ರಶೇಖರ್ ಸ್ವಾಮೀಜಿ ಸನ್ಮಾನಿಸಿದರು
ಹುಕ್ಕೇರಿ ಹಿರೇಮಠದ ‘ಭಾವೈಕ್ಯ ದಸರಾ’ದಲ್ಲಿ ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಅವರನ್ನು ಚಂದ್ರಶೇಖರ್ ಸ್ವಾಮೀಜಿ ಸನ್ಮಾನಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT