ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರ ಆಗುವುದಕ್ಕಿಂತ, ಮತ ಚಲಾಯಿಸುವುದು ಮುಖ್ಯ: ನ್ಯಾಯಾಧೀಶ ಕೆ.ಎಸ್.ರೊಟ್ಟೇರ್

Published 25 ಜನವರಿ 2024, 14:26 IST
Last Updated 25 ಜನವರಿ 2024, 14:26 IST
ಅಕ್ಷರ ಗಾತ್ರ

ಹುಕ್ಕೇರಿ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ಮೀರಿದ ವ್ಯಕ್ತಿಗಳು ಮತದಾರರಾಗುವುದು ಮುಖ್ಯವಲ್ಲ. ಮತ ಚಲಾಯಿಸುವುದು ಅತ್ಯಂತ ಮುಖ್ಯ’ ಎಂದು ನ್ಯಾಯಾಧೀಶ ಕೆ.ಎಸ್.ರೊಟ್ಟೇರ್ ಹೇಳಿದರು.

ಸ್ಥಳೀಯ ತಹಶೀಲ್ದಾರ್ ಕಚೇರಿಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಸರಾಸರಿ ಶೇ 60ರಷ್ಟು ಮಾತ್ರ ಮತದಾನವಾಗುತ್ತಿರುವುದು ಒಳ್ಳೆಯದಲ್ಲ ಎಂದರು.

ನ್ಯಾಯಾಧೀಶ ಅಂಬಣ್ಣ ಕೆ, ತಹಶೀಲ್ದಾರ್ ಮಂಜುಳಾ ನಾಯಕ, ಅಮ್ಮಣಗಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ವಾಳಕಿ ಮಾತನಾಡಿದರು.

ಹಿಡಕಲ್ ಡ್ಯಾಂ ಹೈಸ್ಕೂಲಿನ ಶಿಕ್ಷಕ ಜೆ.ಎಸ್.ಕರೆಣ್ಣವರ ಉಪನ್ಯಾಸ ನೀಡಿದರು. ಪ್ರಬಂಧ, ಭಿತ್ತಿಪತ್ರ ಮತ್ತು ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಾಲ್ಲೂಕಿನ ಹುಲ್ಲೋಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಬಾಳೇಶ್ ತಂಗಡಿ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಅಭಿನಂದನೆ ಸಲ್ಲಿಸಲಾಯಿತು.

ಎಸ್.ಎಸ್.ಎನ್.ಕಾಲೇಜು ಮತ್ತು ಕಾನೂನು ಸೇವಾ ಸಮಿತಿ ಸಂಯುಕ್ತವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಾಥಾ ನಡೆಸಿದರು. ನ್ಯಾಯಾಧೀಶರು, ವಕೀಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಗ್ರೇಡ್–2 ತಹಶೀಲ್ದಾರ್ ಪ್ರಕಾಶ ಕಲ್ಲೋಳಿ, ತಾಲ್ಲೂಕು ಪಂಚಾಯ್ತಿ ಇಒ ಪ್ರವೀಣ ಕಟ್ಟಿಮನಿ, ಎಜಿಪಿ ಅನಿಲ ಕರೋಶಿ, ಸಿಡಿಪಿಒ ಹೊಳೆಪ್ಪ, ಪಿಇಒ ರವೀಂದ್ರ ಶೆಟ್ಟಿಮನಿ, ಬಿಇಒ ಪ್ರಭಾವತಿ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಅನೀಸ್ ವಂಟಮೂರಿ, ಉಪಾಧ್ಯಕ್ಷ ಬಸು ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ್, ಸಹಕಾರ್ಯದರ್ಶಿ ವಿಠ್ಠಲ್ ಘಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಮಹಿಳಾ ಪ್ರತಿನಿಧಿ ಅನೀತಾ ಕುಲಕರ್ಣಿ, ಒಬಿಸಿ ಅಧಿಕಾರಿ ಮಹಾಂತೇಶ ಊರೊಳಗಿನ, ಎಸ್.ಡಬ್ಲೂ.ಒ ಎಚ್.ಎ.ಮಾಹುತ್, ಎಡಿಎಚ್ ತತ್ಯಾಸಾಬ ನಾಂದನಿ, ಎಡಿಎ ರಾಯ್ಕರ್ ಸಹಾಯಕ ನಿರ್ದೇಶಕ ಪ್ರಶಾಂತ ಮುನ್ನೋಳಿ, ಮಂಜುಳಾ ಅಡಿಕೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

ಬಿ.ಆರ್.ಸಿ. ಸಮನ್ವಯಾಧಿಕಾರಿ ಎ.ಎಸ್.ಪದ್ಮನ್ನವರ ಸ್ವಾಗತಿಸಿದರು. ಸುಮಾ ಮಡಿವಾಳರ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT