ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ವೈಭವದ ಬಸವಣ್ಣ ಪಲ್ಲಕ್ಕಿ ಉತ್ಸವ

ಹಲಗತ್ತಿ ಗ್ರಾಮದಲ್ಲಿ ಮನೆ ಮಾಡಿ ಯುಗಾದಿ ಸಂಭ್ರಮ
Last Updated 21 ಮಾರ್ಚ್ 2023, 16:33 IST
ಅಕ್ಷರ ಗಾತ್ರ

ರಾಮದುರ್ಗ: ಹಲಗತ್ತಿ ಗ್ರಾಮದಲ್ಲಿ ಯುಗಾದಿ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಗ್ರಾಮದ ಬಸವಣ್ಣ ದೇವರ ಪಲ್ಲಕ್ಕಿ ಉತ್ಸವ ಮಾರ್ಚ್‌ 27ರಂದು ಅದ್ಧೂರಿಯಾಗಿ ಜರುಗಲಿದೆ.

ಮಾರ್ಚ್‌ 22ರಂದು ಓಕುಳಿ ಹೊಂಡ ಪೂಜೆ ನೆರವೇರುವುದು. ನಂತರ ಮೂರು ದಿನ ಬಣ್ಣದ ಓಕುಳಿ ವೈಭವದಿಂದ ನೆರವೇರಲಿದೆ.

ಮಲಪ್ರಭೆ ನದಿ ದಡದಲ್ಲಿರುವ ಹಲಗತ್ತಿ ಸುಂದರ ತಾಣ. ಬಸವಣ್ಣನ ಹರಕೆ ತೀರಿಸಲು ಸುತ್ತಲಿನ ಜನ ಭಕ್ತಿ ಭಾವದಿಂದ ಆಗಮಿಸುತ್ತಾರೆ. ಹೆಣ್ಣುಮಕ್ಕಳು ಗಂಡನ ಮನೆಯಿಂದ ಯುಗಾದಿ ಹಬ್ಬಕ್ಕೆಂದು ತವರಿಗೆ ಆಗಮಿಸಿ, ಬಸವಣ್ಣನ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಹರಕೆ ತೀರಿಸುತ್ತಾರೆ.

26ರಂದು ಸಂಜೆ ಬಸವಣ್ಣನ ಬೆಳ್ಳಿ ಮೂರ್ತಿ ಪಲ್ಲಕ್ಕಿಯಲ್ಲಿ ಇಟ್ಟು ಪೂಜಿಸಲಾಗುವುದು. ಅಲ್ಲಿಂದ ಜನರು ಬೇಟೆಯಾಡಲು ಹೋಗುತ್ತಾರೆ. ಅದೇ ದಿನ ರಾತ್ರಿ ಗುಡ್ಡದಿಂದ ಮರಳಿ ಊರಿಗೆ ಬಸವಣ್ಣ ಪಲ್ಲಕ್ಕಿಯನ್ನು ರಾತ್ರಿ 6 ಗಂಟೆಗೆ ತಂದು ಹಳೆ ಪಂಚಾಯಿತಿ ಕಟ್ಟೆಯ ಮೆಲೆ ಇಡುತ್ತಾರೆ. ಆ ದಿನ ಪೂರ್ತಿ ಜಾಗರಣೆ ನಡೆಯುತ್ತದೆ.

27ರಂದು ಬಸವಣ್ಣನ ಗುಡಿಯ ಒಳಗೆ ಪ್ರವೇಶ ಮಾಡುತ್ತಾನೆ. ಕರಡಿ ಮಜಲು, ಡೊಳ್ಳು ಹಾಗೂ ಭಾಜಾ ಭಜಂತ್ರಿಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಭಕ್ತರು ಚುರುಮರಿ ಬೆತ್ತಾಸು, ಉತ್ತತ್ತಿ ಹಾಗೂ ಚಿಲ್ಲರೆ ನಾಣ್ಯಗಳನ್ನು ತೂರುತ್ತಾರೆ.

ಗುಡಿ ಸುತ್ತಲು ಪಲ್ಲಕ್ಕಿ ಮೂರು ಸುತ್ತು ಸುತ್ತುವ ವೇಳೆ ಭಕ್ತರು ಟೆಂಗಿನ ಕಾಯಿ, ಜೋಳ ಮತ್ತು ಸಜ್ಜೆಯ ಕುಚಗಡಬು ಎಸೆಯುವುದು ಇನ್ನೊಂದು ವಿಶೇಷ. ನಂತರ ಬ್ರಾಹ್ಮಣರು, ಊರು ಹಿರಿಯರು ಸೇರಿ ಹೊಸ ಪಂಚಾಂಗವನ್ನು ಓದಿ ಫಲಾಫಲಗಳನ್ನು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT