ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮುರಗುಂಡಿ ಗ್ರಾಮದ ಬಳಿ ಸಂಕೇಶ್ವರ– ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರು ನಡುವೆ ಭಾನುವಾರ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರದ ರಾಹುಲ್ ಗೌರಿಶಂಕರ ಮ್ಯಾಳೇಶಿ (30), ಸಂಗಮನಾಥ ಗಿರೀಶ ಅಮರಗೊಂಡ (31) ಕಾರು ಚಾಲಕ ಗಿರೀಶ ಅಶೋಕ ಬಳೂರ್ಗಿ (30) ಮತ್ತು ರಾಧಿಕಾ ರಾಹುಲ್ ಮ್ಯಾಳೇಶಿ (28) ಮೃತರು. ಕಾರಿನಲ್ಲಿದ್ದ ಮಹೇಶ ತಿವಾರಿ ಎಂಬುವರಿಗೆ ಗಾಯಗಳಾಗಿವೆ.

‘ಕಾರಿನಲ್ಲಿದ್ದವರು ಮಹಾರಾಷ್ಟ್ರದ ಕೊಲ್ಹಾಪುರದ ಮಹಾಲಕ್ಷ್ಮಿದೇವಿಯ ದರ್ಶನ ಪಡೆದು ಮರಳುತ್ತಿದ್ದರು. ಬಸ್, ಅಥಣಿ ಕಡೆಯಿಂದ ಕಾಗವಾಡ ಮಾರ್ಗವಾಗಿ ಮೀರಜ್ಗೆ ಹೊರಟಿತ್ತು’ ಎಂದು ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.