ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿರಿಯ ನಾಗರಿಕರಿಗೆ ಗುಣಮಟ್ಟದ ಜೀವನ ಕಲ್ಪಿಸಿ’

Last Updated 14 ಜೂನ್ 2021, 16:40 IST
ಅಕ್ಷರ ಗಾತ್ರ

ಬೆಳಗಾವಿ: ‘ಹಿರಿಯ ನಾಗರಿಕರ ಮೇಲಿನ ದೌರ್ಜನ್ಯವು ಗಂಭೀರ ಸ್ವರೂಪದ್ದಾಗಿದ್ದು, ಅದು ಸಾರ್ವಜನಿಕ ಆರೋಗ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಅವರಿಗೆ ಹಣಕಾಸಿನ ತೊಂದರೆ ಕೊಡುವುದು ಅಕ್ಷಮ್ಯ ಅಪರಾಧ’ ಎಂದು ಜಿರಿಯಾಟ್ರಿಕ್‌ ಸೊಸೈಟಿ ಆಫ್ ಇಂಡಿಯಾದ ಡಾ.ಪಿ.ಎಸ್. ಶಂಕರ ಹೇಳಿದರು.

ವಿಶ್ವ ಹಿರಿಯ ನಾಗರಿಕರ ದೌರ್ಜನ್ಯ ಜಾಗೃತಿ ದಿನಾಚರಣೆ ಅಂಗವಾಗಿ ಇಲ್ಲಿನ ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಜಿರಿಯಾಟ್ರಿಕ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಹಿರಿಯರೂ ಸಮಾಜದ ಹಾಗೂ ಕುಟುಂಬದ ಪ್ರೀತಿಯ ಸದಸ್ಯ ಎನ್ನುವುದನ್ನು ಅರಿಯಬೇಕು. ಯಾವ ರೀತಿಯ ದೌರ್ಜನ್ಯ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಅದಕ್ಕೆ ಪರಿಹಾರ ಹುಡುಕಬೇಕು. ಉತ್ತಮ ಗುಣಮಟ್ಟದ ಜೀವನ ಕಲ್ಪಿಸಬೇಕು. ಅವರು ಸಮಾಜ ಹಾಗೂ ಕುಟುಂಬಕ್ಕೆ ನೀಡಿದ ಕೊಡುಗೆ ನಿರ್ಲಕ್ಷಿಸಬಾರದು’ ಎಂದು ತಿಳಿಸಿದರು.

ಭಾರತೀಯ ಹಿರಿಯ ನಾಗರಿಕರ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಡಾ.ಎಂ.ವಿ. ಜಾಲಿ, ‘ವಿಶ್ವದಾದ್ಯಂತ ಇರುವ ಹಿರಿಯ ನಾಗರಿಕರ ಯೋಗಕ್ಷೇಮ ಕಾಪಾಡಲು ಹಾಗೂ ಅವರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕವಾಗಿ ಗೌರವಿಸಲು ಪರಿಣಾಮಕಾರಿ ಯೋಜನೆ ಅವಶ್ಯವಿದೆ. ಅದನ್ನು ಅನುಷ್ಠಾನಕ್ಕೆ ತರಲು ಸಂಸ್ಥೆಯು ಕಾರ್ಯಪ್ರವೃತ್ತವಾಗಿದೆ’ ಎಂದರು.

‘ಅವರ ಆರೋಗ್ಯ ಹಾಗೂ ಹಕ್ಕುಗಳನ್ನು ರಕ್ಷಿಸಲು ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ‘ಕೆಎಲ್‌ಇ-ಹೆಲ್ತ್‌ ಎಲ್ಡರ್ಸ್ ಲೈಫ್ ವೆಲ್‌ನೆಸ್‌ ಪ್ರೋಗ್ರಾಂ’ ಅನುಷ್ಠಾನಕ್ಕೆ ತರಲಾಗಿದೆ. ದಶಕದ ಹಿಂದೆಯೇ ಜಿರಿಯಾಟ್ರಿಕ್ ಕ್ಲಿನಿಕ್ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ಡಾ.ವಿವೇಕ ಹಂಡಾ, ಡಾ.ಎನ್.ಎಸ್. ನೇಖಿ, ಡಾ.ಒ.ಪಿ. ಶರ್ಮಾ, ಡಾ.ಆನಂದ ಪಿ. ಅಂಬಲಿ, ಡಾ.ಗರಿಮಾ ಹಂಡಾ, ಡಾ.ಎಸ್.ಆರ್. ಅಯ್ಯರ, ಡಾ.ಎಂ.ಇ. ಒಯೆಲೆಕರ, ಡಾ.ಉಲ್ಲಾಸ ಕಾಮತ, ಡಾ.ಅಂಜಲಿ ದೇಶಪಾಂಡೆ, ಡಾ.ಭಾರತಿ ಸುಬ್ರಮಣಿಯನ್, ಡಾ.ಧಿರೇಶಕುಮಾರ, ಡಾ.ಕೌಶಿಕ ರಂಜನ, ಡಾ.ಪ್ರಭಾ ಅಧಿಕಾರಿ, ಡಾ.ರಾಕೇಶಕುಮಾರ, ಡಾ.ಸಜೇಶ ಅಶೋಕನ್, ಡಾ.ಸಂದೀಪ ತಮನೆ, ಡಾ.ಸೀಮಾ ಗ್ರೋವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT