ಶನಿವಾರ, ಅಕ್ಟೋಬರ್ 16, 2021
29 °C

ಹೊಸಪೇಟೆಯಲ್ಲಿ ನೂರು ರೂಪಾಯಿ ಗಡಿ ದಾಟಿದ ಡೀಸೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಪರ್ಧೆಗೆ ಬಿದ್ದಂತೆ ಏರುಗತಿಯಲ್ಲಿ ಸಾಗಿವೆ.

ಪ್ರತಿ ಲೀಟರ್ ಪೆಟ್ರೋಲ್ ದರ ನೂರರ ಗಡಿ ದಾಟಿ ಅನೇಕ ತಿಂಗಳಾಗಿವೆ. ಈಗ ಅದೇ ದಾರಿಯಲ್ಲಿ ಡೀಸೆಲ್‌ ದರ ಸಾಗಿದೆ. ನಗರದಲ್ಲಿ ಸೋಮವಾರ ಪ್ರತಿ ಲೀಟರ್ ಡೀಸೆಲ್‌ ದರ ₹100.10ಕ್ಕೆ ಏರಿಕೆ ಕಂಡಿದೆ. ಭಾನುವಾರ ₹99.75 ಇತ್ತು. ಒಂದೇ ದಿನದಲ್ಲಿ 35 ಪೈಸೆ ಏರಿಕೆ ಕಂಡಿದೆ. ಇನ್ನು, ಪೆಟ್ರೋಲ್ ದರ ₹109. 95 ಕ್ಕೆ‌ ಹೆಚ್ಚಾಗಿದೆ.

ಸತತವಾಗಿ ತೈಲ ದರ ಹೆಚ್ಚಾಗುತ್ತಿರುವುದರಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಬೆಲೆ ಹೆಚ್ಚಳದಿಂದ ಸಾರ್ವಜನಿಕರು ಕಂಗೆಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು