5.7 ಲಕ್ಷದ ನಶೆ ಮಾತ್ರೆ, ಇಬ್ಬರು ವಶಕ್ಕೆ

ಹೊಸಪೇಟೆ (ವಿಜಯನಗರ): ಅಕ್ರಮವಾಗಿ ಸಾಗಿಸುತ್ತಿದ್ದ ₹5.7 ಲಕ್ಷ ಮೌಲ್ಯದ ಎಲ್.ಎಸ್.ಡಿ. ನಶೆ ಮಾತ್ರೆ ಹಾಗೂ ಇಬ್ಬರನ್ನು ಇಲ್ಲಿನ ಚಿತ್ತವಾಡ್ಗಿ ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ರಘುನಾಥ ಕುಮಾರ್, ಹಿರಿಯೂರಿನ ಸೊಲಮನ್ ಹಾಗೂ ಅವರಿಂದ ಹುಂಡೈ ಕಾರು, ಎರಡು ಮೊಬೈಲ್, ₹35 ಸಾವಿರ ನಗದು ಸಹ ವಶಪಡಿಸಿಕೊಂಡಿದ್ದಾರೆ. ಎಲ್ಲದರ ಒಟ್ಟು ಮೊತ್ತ ₹16.2 ಲಕ್ಷವಾಗಲಿದೆ.
‘ನಗರದ ಕಾಲೇಜು ರಸ್ತೆಯ ಚೆಕ್ಪೋಸ್ಟ್ನಲ್ಲಿ ಕಾರು ತಡೆದು ಪರಿಶೀಲನೆ ನಡೆಸಿದಾಗ ನಶೆ ಮಾತ್ರೆ ಇರುವುದು ಪತ್ತೆಯಾಗಿದೆ. ಎಲ್ಲಿಂದ, ಎಲ್ಲಿಗೆ ಸಾಗಿಸುತ್ತಿದ್ದರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ತವಾಡ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.