ಭಾನುವಾರ, ಜನವರಿ 19, 2020
26 °C

ಹೊಸಪೇಟೆ: ‘ಹಂಪಿ ಉತ್ಸವ’ಕ್ಕೆ ಉಚಿತ ಬಸ್‌ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಜ. 10,11ರಂದು ನಡೆಯಲಿರುವ ‘ಹಂಪಿ ಉತ್ಸವ’ಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸಾರ್ವಜನಿಕರಿಗೆ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ನಗರದ ಕೇಂದ್ರ ಬಸ್‌ ನಿಲ್ದಾಣ ಹಾಗೂ ವಿವಿಧ ಬಡಾವಣೆಗಳಿಂದ ಪ್ರತಿ ಐದು ನಿಮಿಷಕ್ಕೆ ಒಂದರಂತೆ ಬಸ್‌ಗಳು ಸಂಚರಿಸಲಿವೆ. ಬೆಳಿಗ್ಗೆ 10ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ನಗರದಿಂದ ಹಂಪಿ ಕಡೆಗೆ, ತಡರಾತ್ರಿ ಎರಡು ಗಂಟೆಯಿಂದ ಹಂಪಿಯಿಂದ ನಗರದ ಕಡೆಗೆ ಬಸ್‌ಗಳು ಸಂಚರಿಸಲಿವೆ. ‘ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)