ಬುಧವಾರ, ಅಕ್ಟೋಬರ್ 21, 2020
23 °C

ಬಳ್ಳಾರಿ ಜಿಲ್ಲೆಯಲ್ಲಿ ಭಾರಿ ಮಳೆ: 350 ಎಕರೆ ಬೆಳೆ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಭಾರಿ ಮಳೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ 350 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆ ನಷ್ಟವಾಗಿದೆ.

ಶನಿವಾರ ರಾತ್ರಿ ಭಾರಿ ಮಳೆಯಾಗಿದೆ. ಭಾನುವಾರವೂ ಮಳೆಯ ಆರ್ಭಟ ಮುಂದುವರಿಯಿತು. ನಾರಿಹಳ್ಳ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ್ದರಿಂದ ನೆರೆ ಬಂದು ಕುರೇಕುಪ್ಪ, ವಡ್ಡು, ಬಸಾಪುರ, ತಾಳೂರು, ಬನ್ನಿಹಟ್ಟಿ, ನಾಗಲಾಪುರ, ಬನ್ನಿಹಟ್ಟಿ ಮತ್ತು ತಾರಾನಗರದಲ್ಲಿ ಬೆಳೆ ನಷ್ಟವಾಗಿದೆ.

ದರೋಜಿ ಕೆರೆ ಎರಡನೇ ಸಲ ತುಂಬಿ ಕೋಡಿ ಬಿದ್ದಿರುವುದರಿಂದ ಗ್ರಾಮದ ಸುತ್ತಮುತ್ತಲಿನ ಬೆಳೆ ಹಾಳಾಗಿದೆ. ಭತ್ತ, ಮೆಣಸಿನಕಾಯಿ, ಹತ್ತಿ, ಜೋಳ, ಕರಿಬೇವು, ಕಲ್ಲಂಗಡಿ ಸೇರಿದಂತೆ ಇತರೆ ಬೆಳೆಗಳನ್ನು ರೈತರು ಬೆಳೆಸಿದ್ದಾರೆ.

ಹೊಸಪೇಟೆಯಲ್ಲಿ ಶನಿವಾರ ರಾತ್ರಿ ಸುರಿದಿದ್ದ ಮಳೆ, ಭಾನುವಾರ ಸಂಜೆಯ ವರೆಗೆ ಬಿಡುವು ಕೊಟ್ಟಿತ್ತು. ಸಂಜೆಯ ನಂತರ ಬಿರುಸಾಗಿ ಸುರಿಯಿತು. ಕೂಡ್ಲಿಗಿ, ಕೊಟ್ಟೂರಿನಲ್ಲೂ ಮಳೆಯಾಗಿದೆ.


ಸಂಡೂರು ತಾಲ್ಲೂಕಿನ ದರೋಜಿ ಕೆರೆಗೆ ಕೋಡಿ ಬಿದ್ದಿರುವುದು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು