ಮಂಗಳವಾರ, ಜನವರಿ 28, 2020
19 °C

ಅನುಮತಿಯಿಲ್ಲದೆ ಪ್ಲಾಸ್ಟಿಕ್‌ ಫ್ಲೆಕ್ಸ್‌: ನಗರಸಭೆ ಅಧಿಕಾರಿಗೆ ಕವಿರಾಜ್‌ ಆವಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹೊಸಪೇಟೆ: ಅನುಮತಿಯಿಲ್ಲದೆ ಹೊಸ ವರ್ಷದ ಶುಭಕೋರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಮುಂದಾದ ನಗರಸಭೆಯ ಆರೋಗ್ಯ ಅಧಿಕಾರಿ ವೆಂಕಟೇಶ್‌ ಅವರಿಗೆ ಮುಖಂಡ ಕವಿರಾಜ್‌ ಅರಸ್‌ ಅವರು ಬುಧವಾರ ನಗರದಲ್ಲಿ ಜೋರು ಧ್ವನಿಯಲ್ಲಿ ಆವಾಜ್‌ ಹಾಕಿದರು.

‘ಇಡೀ ಊರಲ್ಲಿ ಯಾರ್‍ಯಾರೋ ಫ್ಲೆಕ್ಸ್‌ ಹಾಕುತ್ತಾರೆ. ನಾನು ಹಾಕಿಸಿದರೆ ನಿಮಗೇನೂ ತೊಂದರೆ. ದೇವರಾಣೆ ನಾನು ನಗರಸಭೆ ಕಚೇರಿಗೆ ಬಂದರೆ ಬೆಂಕಿ ಹತ್ಕೊಳ್ಳುತ್ತೆ. ಅಧಿಕಾರಿಗಳು ಈ ರೀತಿ ಮಾಡುತ್ತಿರುವುದು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಕವಿರಾಜ್‌ ಅವರು ಅನುಮತಿ ಪಡೆಯದೇ ಫ್ಲೆಕ್ಸ್‌ಗಳನ್ನು ಹಾಕಿಸಿದ್ದರು. ಅದು ಕೂಡ ಪ್ಲಾಸ್ಟಿಕ್‌ ಮೇಲೆ. ಅದನ್ನು ನಮ್ಮ ಸಿಬ್ಬಂದಿ ತೆಗೆಯಲು ಹೋಗಿದ್ದರು. ಈ ವೇಳೆ ಕವಿರಾಜ್‌ ಅವರು ಬಂದು ತಡೆಯಲು ಪ್ರಯತ್ನಿಸಿದ್ದರು. ಅವರಿಗೆ ವಿಷಯ ಮನವರಿಕೆ ಮಾಡಿಕೊಟ್ಟು. ಈ ಸಲ ಏನೋ ಹಾಕಿದ್ದೀರಿ. ಮುಂದೆ ಈ ರೀತಿ ಆಗದಂತೆ ನಡೆದುಕೊಳ್ಳಬೇಕು ಎಂದು ಹೇಳಿ ಸಮಾಧಾನ ಪಡಿಸಿ ಕಳುಹಿಸಲಾಯಿತು’ ಎಂದು ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)