ಕಂಪ್ಲಿ: ಮೃತ ವ್ಯಕ್ತಿಯ ಸುತ್ತಲೂ ರೋಧಿಸುತ್ತಿದ್ದ ಕುಟುಂಬಸ್ಥರ ನಡುವೆ ಏಕಾಏಕಿ ಪ್ರತ್ಯಕ್ಷವಾದ ಕೋತಿಯೊಂದು ಕಳೇಬರ ಅಂತಿಮ ದರ್ಶನ ಪಡೆದು ಮರಳಿತ್ತು. ನಂತರ ಉತ್ತರಾದಿ ಕ್ರಿಯೆ ವೇಳೆಯಲ್ಲಿಯೂ ಈ ಕೋತಿ ಹಾಜರಾಗಿತ್ತು. ಈ ದೃಶ್ಯಾವಳಿಯನ್ನು ಸೆರೆಹಿಡಿದ ವಿಡಿಯೊ ತುಣುಕೊಂದುಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಪ್ರಸಾರವಾಗಿದೆ.
ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್‍ನಲ್ಲಿ ಕಳೆದ ತಿಂಗಳು 30ರಂದು ವಿಶ್ವನಾಥ ರಾಜು (70) ನಿಧನರಾಗಿದ್ದರು. ಅದೇ ದಿನ ಕೋತಿಯು ಮೃತರ ಪಾರ್ಥಿವ ಶರೀರದ ಬಳಿ ಬಂದು ತಲೆ ಮೇಲಿನ ಹೊದಿಕೆ ತೆಗೆದು, ವ್ಯಕ್ತಿ ಮುಖದ ಮೇಲೆ ತಲೆ ಇಟ್ಟು ಮರುಗಿತ್ತು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿತ್ತು.ಇದಾದ 9ದಿನಗಳ ನಂತರ ತುಂಗಭದ್ರಾ ನದಿ ಬಳಿ ಮೃತರ ಉತ್ತರಾದಿ ಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಇದೇ ಕೋತಿ ಭಾಗವಹಿಸಿ ಪುರೋಹಿತರ ತೊಡೆ ಮೇಲೆ ಕ್ಷಣ ಕಾಲ ಕುಳಿತಿದೆ. ಬಳಿಕ ಸ್ವಲ್ಪ ಪಾಯಸ ಸೇವಿಸಿ ಅಲ್ಲಿಂದ ಹೊರಟು ಹೋಯಿತು. ಇವೆಲ್ಲ ದೃಶ್ಯಗಳು ಸೆರೆಯಾಗಿದ್ದು, ಎಲ್ಲೆಡೆ ಹರಿದಾಡಿವೆ.
‘ವಿಶ್ವನಾಥ ಅವರು ರೈತರಾಗಿದ್ದರು. ಅವರು ಅನಾರೋಗ್ಯದಿಂದ ಮೃತರಾಗಿದ್ದರು. ಅವರಿಗೆ ಕೋತಿಗಳಿಗೆ ಯಾವುದೇ ರೀತಿಯ ಒಡನಾಟವಿಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದೆ’ ಎಂದು ಮೃತರ ಮಾವ ವೆಂಕಟರಾಮರಾಜು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.