ಬೆಂಗಳೂರು: ಇಲ್ಲಿನ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಒಂದೆಡೆ ಮಕ್ಕಳ ಕಲರವ ಮಾರ್ದನಿಸಿದರೆ, ಇನ್ನೊಂದೆಡೆ ಗಣಿತದಲ್ಲಿನ ಅವರ ಜಾಣ್ಮೆ ಅನಾವರಣಗೊಂಡಿತು.

ಬ್ರೈನೋಬ್ರೇನ್ ಇಂಟರ್ನ್ಯಾಷನಲ್ ಹಮ್ಮಿಕೊಂಡಿದ್ದ ‘ಬ್ರೈನೋಬ್ರೇನ್’ ರಾಜ್ಯಮಟ್ಟದ ಮನೋಗಣಿತ ಉತ್ಸವದಲ್ಲಿ ಸುಮಾರು ಎರಡು ಸಾವಿರ ಮಕ್ಕಳು ಪಾಲ್ಗೊಂಡಿದ್ದರು. ಬೆಂಗಳೂರು ಮಾತ್ರವಲ್ಲದೆ, ಬೆಳಗಾವಿ, ಕೊಡಗು, ತುಮಕೂರು, ಕೋಲಾರ, ದೊಡ್ಡಬಳ್ಳಾಪುರ, ಕಲಬುರಗಿ, ದಕ್ಷಿಣ ಕನ್ನಡ, ಬಳ್ಳಾರಿ, ಬಾಗಲಕೋಟೆ ಇತ್ಯಾದಿ ಜಿಲ್ಲೆಗಳ ಮಕ್ಕಳೊಂದಿಗೆ ಪೋಷಕರು ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಬೆಳಿಗ್ಗೆಯಿಂದಲೇ ಪ್ರಾರಂಭವಾದ ವಿವಿಧ ಹಂತಗಳ ಸ್ಪರ್ಧೆಗಳಲ್ಲಿ ಗಣಿತದ ವಿವಿಧ ಸವಾಲುಗಳನ್ನು ಮಕ್ಕಳು ಯಾವುದೇ ಉಪಕರಣಗಳ ನೆರವಿಲ್ಲದೆ ಕ್ಷಣಾರ್ಧದಲ್ಲಿ ಬಗೆಹರಿಸಿದರು. 4ರಿಂದ 14 ವರ್ಷದ ಮಕ್ಕಳಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಮಕ್ಕಳ ಮನೋಗಣಿತದ ವೇಗವನ್ನು ಅಳೆಯಲು ಮೂರು ನಿಮಿಷಗಳ ಪರೀಕ್ಷೆಗಳು ಸವಾಲಿನಂತಿದ್ದವು. ವಿವಿಧ ವಿಭಾಗಗಳಲ್ಲಿ ಒಟ್ಟು 261 ಮಕ್ಕಳು ಚಾಂಪಿಯನ್ ಆಗಿ ಹೊರಹೊಮ್ಮಿದರು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪ್ರದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ಬ್ರೈನೋಬ್ರೇನ್ ಇಂಟರ್ನ್ಯಾಷನಲ್ನ ವ್ಯವಸ್ಥಾಪಕ ನಿರ್ದೇಶಕ ಆನಂದ ಸುಬ್ರಮಣ್ಯಮ್, ‘ಬ್ರೈನೋಬ್ರೇನ್ ಉತ್ಸವವು ಮಕ್ಕಳ ಗಣಿತದ ಜಾಣ್ಮೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಅವರನ್ನು ಮಾನಸಿಕವಾಗಿ ಸದೃಢಗೊಳಿಸಿ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತಿದೆ. ಕೇವಲ ಶೈಕ್ಷಣಿಕ ಬೆಳವಣಿಗೆ ನಮ್ಮ ಉದ್ದೇಶವಲ್ಲ. ಮಕ್ಕಳ ವ್ಯಕ್ತಿತ್ವದ ಬೆಳವಣಿಗೆ, ಸಂಘಟಿತ ಸಾಮರ್ಥ್ಯವನ್ನೂ ಉತ್ತೇಜಿಸಿ, ಅವರ ಶಕ್ತಿಯನ್ನು ಅವರು ಅರ್ಥಮಾಡಿಕೊಳ್ಳುವಂತೆ ಮಾಡುವ ಗುರಿಯನ್ನು ಈ ಉತ್ಸವ ಹೊಂದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.