ಬೆಂಗಳೂರು: ‘ಬಸ್ ತಂಗುದಾಣಗಳಲ್ಲಿ ಆಸನ ವ್ಯವಸ್ಥೆ, ಮಾರ್ಗ ನಕ್ಷೆ, ಮತ್ತು ವಿವರಗಳನ್ನು ನೀಡಬೇಕು, ಸುತ್ತಮುತ್ತ ಪಾದಚಾರಿ ಮಾರ್ಗಗಳ ಸುಧಾರಣೆ ಆಗಬೇಕಿದೆ’ ಎಂದು ಬಿ.ಪ್ಯಾಕ್ ನಡೆಸಿದ ‘ಬಿ.ಸೇಫ್’ ಸಮೀಕ್ಷೆ ತಿಳಿಸಿದೆ.

ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳಲ್ಲಿ ‘ಬಿ.ಸೇಫ್ ಕ್ಷೇತ್ರ’ ಶೀರ್ಷಿಕೆಯಡಿ ನಡೆಸಿದ ಮಹಿಳಾ ಸುರಕ್ಷತಾ ಸಮೀಕ್ಷಾ ವರದಿ ಬಿಡುಗಡೆ ಮಾಡಲಾಗಿದೆ.

‘ಅಂಗನವಾಡಿ ಕೇಂದ್ರಗಳನ್ನು ಪೂರ್ಣ ದಿನದ ಆರೈಕೆ ಕೇಂದ್ರಗಳಾಗಿಸಬೇಕು, ಕೆಲ ಉದ್ಯಾನಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಉದ್ಯಾನದ ಒಳಗೆ ಹಾಗೂ ಹೊರಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು. ದಿನವಿಡೀ ಸಾರ್ವಜನಿಕ ಶೌಚಾಲಯಗಳನ್ನು ತೆರೆಯಬೇಕು. ಸ್ಯಾನಿಟರಿ ಪ್ಯಾಡ್ಗಳಂತಹ ಮೂಲಸೌಲಭ್ಯಗಳನ್ನು ಒದಗಿಸಬೇಕು’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿಜಯನಗರ ವಿಧಾನಸಭಾ ಕ್ಷೇತ್ರದ 9 ವಾರ್ಡ್ ಮತ್ತು ಗೋವಿಂದರಾಜನಗರದ 10 ವಾರ್ಡ್ಗಳಲ್ಲಿ ಬಿ.ಸೇಫ್ ಸಮೀಕ್ಷಾ ಅಧ್ಯಯನ ನಡೆಸಲಾಗಿದೆ. ಮಹಿಳೆಯರು ಹೆಚ್ಚಾಗಿ ಭೇಟಿ ನೀಡುವ ಆರು ಪ್ರಮುಖ ವಿಭಾಗಗಳು, 265 ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಆಡಿಟ್ ಮಾಡಲಾಗಿದೆ. 46 ಅಂಗನವಾಡಿ ಕೇಂದ್ರಗಳು, 131 ಬಸ್ ತಂಗುದಾಣಗಳು, 58 ಉದ್ಯಾನಗಳು, 10 ಸಾರ್ವಜನಿಕ ಆರೋಗ್ಯ ಕೇಂದ್ರ, 4 ಪೊಲೀಸ್ ಠಾಣೆ ಮತ್ತು 16 ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಎಷ್ಟು ಸುರಕ್ಷತೆ ಇದೆ ಎಂಬುದರ ಬಗ್ಗೆ ಸಮಗ್ರವಾಗಿ ಅಭಿಪ್ರಾಯ ಸಂಗ್ರಹಿಸಿ, ಅಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.

ನಟಿ ಆಶಾಭಟ್, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ವೈಷ್ಣವಿ ಹಾಗೂ ಸಿಜಿಐ ಉಪಾಧ್ಯಕ್ಷೆ ಶ್ರೀವಿದ್ಯಾ ನಟರಾಜ್ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದರು. ಸಿಎಸ್ಆರ್ ಮತ್ತು ಇಎಸ್ಜಿ ಮುಖ್ಯಸ್ಥ ಸುಧಾಕರ್ ಪೈ, ಬಿ.ಪ್ಯಾಕ್ ಟ್ರಸ್ಟಿ ರೇವತಿ ಅಶೋಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.