ದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಮೋಘ ಶತಕದ ಸಾಧನೆ ಮಾಡಿದ್ದಾರೆ.

ಇದು ಟೆಸ್ಟ್ ಕ್ರಿಕೆಟ್ನಲ್ಲಿ ಜೈಸ್ವಾಲ್ ಅವರ ಏಳನೇ ಶತಕವಾಗಿದೆ. ಈ ಪೈಕಿ ಐದನೇ ಸಲ 150ಕ್ಕೂ ಹೆಚ್ಚು ರನ್ಗಳ ಸಾಧನೆ ಮಾಡಿದ್ದಾರೆ.

ಆ ಮೂಲಕ 23ರ ಹರೆಯದ ಜೈಸ್ವಾಲ್, ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ.

24ನೇ ವರ್ಷಕ್ಕೆ ಕಾಲಿರಿಸುವುದಕ್ಕೂ ಮೊದಲು ಅತಿ ಹೆಚ್ಚು 150+ ರನ್ ಸಾಧನೆ ಮಾಡಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದಾರೆ.

ಬ್ರಾಡ್ಮನ್ ಎಂಟು ಸಲ 150ಕ್ಕೂ ಹೆಚ್ಚು ರನ್ಗಳ ಸಾಧನೆ ಮಾಡಿದ್ದರು. ಜೈಸ್ವಾಲ್ ನಂತರದ ಸ್ಥಾನದಲ್ಲಿರುವ ಭಾರತದ ಸಚಿನ್ ತೆಂಡೂಲ್ಕರ್, ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಹಾಗೂ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ತಲಾ ನಾಲ್ಕು ಸಲ 150ರ ಗಡಿ ತಲುಪಿದ್ದರು.

ಭಾರತ 318/2...

ಮೊದಲ ದಿನದಂತ್ಯಕ್ಕೆ ಭಾರತ ಎರಡು ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿದೆ. ಜೈಸ್ವಾಲ್ 253 ಎಸೆತಗಳಲ್ಲಿ ಅಜೇಯ 173 ರನ್ ಗಳಿಸಿ (22 ಬೌಂಡರಿ) ಕ್ರೀಸಿನಲ್ಲಿದ್ದಾರೆ. ಸಾಯಿ ಸುದರ್ಶನ್ 87 ರನ್ ಗಳಿಸಿ ಔಟ್ ಆದರು.
.IND vs WI | ಜೈಸ್ವಾಲ್ ಅಜೇಯ 173: ಭಾರತ ಮೊದಲ ದಿನದ ಅಂತ್ಯಕ್ಕೆ 318\2.ICC Rankings | ಅಗ್ರ ಹತ್ತರಿಂದ ಹೊರಬಿದ್ದ ಗಿಲ್: ಮೇಲೇರಿದ ಜೈಸ್ವಾಲ್, ಸಿರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.