ಬೆಂಗಳೂರು: ಆಟೊ ಪ್ರಯಾಣ ದರ ಏರಿಸುವ ಬಗ್ಗೆ ಆಟೊ ಚಾಲಕರ ಸಂಘಟನೆಗಳಲ್ಲಿ ಪರ, ವಿರೋಧದ ಚರ್ಚೆಗಳ ನಡುವೆ ಮಾರ್ಚ್ 12ರಂದು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಸದ್ಯ ಮೊದಲ ಎರಡು ಕಿಲೋಮೀಟರ್ಗೆ ಕನಿಷ್ಠ ದರ ₹30 ಹಾಗೂ ಆ ನಂತರದ ಪ್ರತಿ ಕಿಲೋ ಮೀಟರ್ಗೆ ₹15 ದರವಿದೆ. ಕಳೆದ ಮೂರು ವರ್ಷಗಳಿಂದ ಈ ದರ ಚಾಲ್ತಿಯಲ್ಲಿದೆ. ಅದನ್ನು ಮೊದಲ 2 ಕಿಲೋಮೀಟರ್ಗೆ ಕನಿಷ್ಠ ದರ ₹40 ಹಾಗೂ ಆ ನಂತರದ ಪ್ರತಿ ಕಿಲೋ ಮೀಟರ್ಗೆ ₹20ಕ್ಕೆ ಏರಿಸಬೇಕು ಎಂದು ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್, ಆದರ್ಶ ಆಟೊ ಯೂನಿಯನ್ಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ವರ್ಷದ ಹಿಂದೆಯೇ ಮನವಿ ಮಾಡಿದ್ದವು.

ತೈಲ ಬೆಲೆ ಏರಿಕೆಯಲ್ಲದೇ, ಆಟೊ ಬಿಡಿಭಾಗಗಳ ದರವೂ ಹೆಚ್ಚಾಗಿದೆ. ಜೀವನ ನಿರ್ವಹಣಾ ವೆಚ್ಚ ಅಧಿಕಗೊಂಡಿದೆ. ಆದರೆ, 2021ರ ಡಿಸೆಂಬರ್ನಲ್ಲಿ ನಿಗದಿಯಾದ ಆಟೊ ದರವೇ ಈಗಲೂ ಇದೆ. ಆಗ ಆಟೊ ಚಾಸಿಗೆ ₹ 1.5 ಲಕ್ಷ ಇದ್ದಿದ್ದು, ಈಗ ₹ 2.70 ಲಕ್ಷ ಆಗಿದೆ. ಯಾರೂ ನಿಗದಿತ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿಲ್ಲ. ಅನಧಿಕೃತ ದರವನ್ನೇ ಅಧಿಕೃತವನ್ನಾಗಿ ಮಾಡಲಿ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ಮನವಿ ಸಲ್ಲಿಸಿ ವರ್ಷ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಭೆ ಕರೆದಿರಲಿಲ್ಲ. ಇದೀಗ ಸಭೆ ನಡೆಸುವಂತೆ ಸಂಚಾರ ವಿಭಾಗದ ಡಿಸಿಪಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಮಾರ್ಚ್ 12ರಂದು ಸಭೆ ನಡೆಯಲಿದೆ ಎಂದು ಆದರ್ಶ ಆಟೊ ಮತ್ತು ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ಏರಿಕೆಗೆ ವಿರೋಧ: ‘ಈಗಿರುವ ದರವೇ ಸಾಕು. ಆದರೆ, ಆ್ಯಪ್ ಆಧಾರಿತ ಬೈಕ್, ಆಟೊ, ಟ್ಯಾಕ್ಸಿಗಳಿಗೆ ಕಡಿವಾಣ ಹಾಕುವ ಮೂಲಕ ನಮಗೆ ದುಡಿಮೆ ಹೆಚ್ಚು ಸಿಗುವಂತೆ ಮಾಡಬೇಕು. ದರ ಹೆಚ್ಚಳ ಮಾಡಿದರೆ ಈಗಿರುವ ಗ್ರಾಹಕರು ಕೂಡ ನಮ್ಮ ಕೈ ತಪ್ಪಲಿದ್ದಾರೆ’ ಎಂದು ಬೆಂಗಳೂರು ಸಾರಥಿ ಸೇನೆ, ಸ್ನೇಹಜೀವಿ ಆಟೊ ಚಾಲಕರ ಟ್ರೇಡ್ ಯೂನಿಯನ್, ಕರುನಾಡ ಸಾರಥಿ ಸೇನೆ ಟ್ರೇಡ್ ಯೂನಿಯನ್, ಬೆಂಗಳೂರು ಆಟೊ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ದರ ಏರಿಕೆ ಮಾಡಿದರೆ ಆಟೊಗಿಂತ ಕ್ಯಾಬ್ಗಳೇ ಕಡಿಮೆ ಮೊತ್ತಕ್ಕೆ ಸಂಚರಿಸಲಿವೆ. ದರ ಹೆಚ್ಚಿಸಿದರೆ ನಾವು ಪ್ರಯಾಣಿಕರನ್ನು ಕಳೆದುಕೊಳ್ಳಲಿದ್ದೇವೆ. ಅದರ ಬದಲು ರ್ಯಾಪಿಡೊ ಬೈಕ್ಗಳನ್ನು ಹೆಸರಿಗಷ್ಟೇ ನಿಷೇಧ ಮಾಡುವ ಬದಲು ಕಾನೂನು ಕ್ರಮ ಕೈಗೊಂಡು ನಿಯಂತ್ರಿಸಿದರೆ ಆಟೊಗಳನ್ನು ಬಳಸುವ ಗ್ರಾಹಕರ ಪ್ರಮಾಣ ಹೆಚ್ಚಲಿದೆ’ ಎಂದು ಬೆಂಗಳೂರು ಸಾರಥಿ ಸೇನೆ ಅಧ್ಯಕ್ಷ ಬಿ. ರಾಮೇಗೌಡ, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.