ಬೆಂಗಳೂರು: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಈ ಬಾರಿ ಅತ್ಯಂತ ಸರಳ ವಾಗಿ ಆಚರಿಸಿದರು. ಕೊರೊನಾ ಸೋಂಕು ವ್ಯಾಪಕವಾಗಿರುವುದರಿಂದ, ಮಸೀದಿಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಹಬ್ಬದ ಸಂಪ್ರದಾಯವಾದ ಕೈ ಕುಲುಕುವುದು ಹಾಗೂ ಆಲಿಂಗನ ಮಾಡಿಕೊಳ್ಳಲು ಈ ಬಾರಿ ಅವಕಾಶ ಇರಲಿಲ್ಲ. ನಮಾಜ್ ವೇಳೆ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸ ಲಾಗಿತ್ತು.

ಕಲಾಸಿಪಾಳ್ಯ, ಚಾಮರಾಜಪೇಟೆ, ಶಾಂತಿನಗರ, ಮೈಸೂರು ರಸ್ತೆ, ಜಯನಗರ, ಬಿಟಿಎಂ ಬಡಾವಣೆ, ಪಾದರಾಯನಪುರ, ಶಿವಾಜಿನಗರ, ಹೆಬ್ಬಾಳ, ಆರ್.ಟಿ.ನಗರದ ಪ್ರಮುಖ ಮಸೀದಿಗಳಲ್ಲಿ ಸರ್ಕಾರದ ನಿಯಮಗಳ ಪಾಲನೆಯೊಂದಿಗೆ ಈದ್ ಸಾಮೂಹಿಕ ಪ್ರಾರ್ಥನೆ ನಡೆದವು.

ಕೊರೊನಾ ಸೋಂಕು ಹರಡುವಿಕೆ ತಡೆಯಲು ಮಸೀದಿಗಳಲ್ಲಿ ಪ್ರಾರ್ಥನೆಗೆ ಬರುವವರ ದೇಹದ ಉಷ್ಣಾಂಶ ಪರೀಕ್ಷೆ ಹಾಗೂ ಸ್ಯಾನಿಟೈಸರ್ ಬಳಸಿ ಕೈತೊಳೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. ಮುಖಗವಸು ಧರಿಸಿದವರಿಗೆ ಮಾತ್ರ ಮಸೀದಿಯೊಳಗೆ ಪ್ರವೇಶ ಕಲ್ಪಿ ಸಲಾಯಿತು. ಮಸೀದಿಗಳಲ್ಲಿ ಹೆಚ್ಚು ಮಂದಿ ಸೇರಲು ಅನುಮತಿ ಇಲ್ಲದ ಕಾರಣ ನಿಗದಿತ ಸಂಖ್ಯೆಯ ಜನರಿಗೆ ಪ್ರಾರ್ಥನೆ ಸಲ್ಲಿಸಲು ಗುರುತಿನ ಚೀಟಿ ನೀಡಲಾಗಿತ್ತು.

ಬಕ್ರೀದ್ ಪ್ರಯುಕ್ತ ಶಿವಾಜಿನಗರದ ಮಸ್ಜಿದ್ ಅಜಂ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಬಂದವರನ್ನು ಥರ್ಮಲ್ ತಪಾಸಣೆಗೆ ಒಳಪಡಿಸಲಾಯಿತು ಪ್ರಜಾವಾಣಿ ಚಿತ್ರ

ಈ ಹಬ್ಬಕ್ಕೆ ಪ್ರಾಣಿ ಬಲಿ ಕೊಟ್ಟು ಅದರ ಮಾಂಸವನ್ನು ಮೂರು ಸಮ ಭಾಗ ಮಾಡಿ ಒಂದು ಭಾಗವನ್ನು ತಮಗೆ ಹಾಗೂ ಉಳಿದೆರಡು ಭಾಗಗಳನ್ನು ಸಂಬಂಧಿಕರು ಅಥವಾ ಬಡವರಿಗೆ ಹಂಚುವುದು ಸಂಪ್ರದಾಯ.

ಆದರೆ, ಕೊರೊನಾದಿಂದಾಗಿ ಸಮುದಾಯದವರು ಈ ಸಲ ಅದ್ದೂರಿಯಾಗಿ ಹಬ್ಬದ ಆಚರಣೆಗೆ ಮುಂದಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.