ಸಂಚಾರ ದುಸ್ತರ

ಮುದ್ದಿನಪಾಳ್ಯದಿಂದ ಜ್ಞಾನಭಾರತಿ ಆರ್ಟಿಒ, ಜಯಂತ್ ಕನ್ವೆನ್ಷನ್ ಹಾಲ್ ಹಾಗೂ ವಿದ್ಯಾನಿಕೇತನ ಶಾಲೆಗೆ ಹೋಗುವ ರಸ್ತೆಯ ಅರ್ಧಭಾಗ ಹಾಳಾಗಿದೆ. ರಸ್ತೆಯುದ್ದಕ್ಕೂ ಒಂದು ಕಡೆ ಮಾತ್ರ ಸಂಚಾರಯೋಗ್ಯವಾಗಿದ್ದು, ಇನ್ನೊಂದೆಡೆ ಡಾಂಬರ್ ಕಿತ್ತು ಹೋಗಿದೆ. ಕೆಲವೆಡೆ ರಸ್ತೆಯ ಅರ್ಧ ಭಾಗ ಕುಸಿತವಾಗಿ, ಸಂಚಾರ ಕಷ್ಟಸಾಧ್ಯವಾಗಿದೆ. ಮಾರುದ್ದದ ಗುಂಡಿಗಳು ಅಲ್ಲಲ್ಲಿ ಕಂಡು ಬರುತ್ತವೆ. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಭಯದಲ್ಲೇ ಸಂಚರಿಸಬೇಕಾದ ದುಃಸ್ಥಿತಿ ಇದ್ದು, ನಿಯಂತ್ರಣ ತಪ್ಪಿ ಬೀಳುವುದು ಸಾಮಾನ್ಯವಾಗಿದೆ. ಅಪಘಾತಗಳೂ ಹೆಚ್ಚುತ್ತಿವೆ. ಹಲವು ತಿಂಗಳಿಂದ ರಸ್ತೆ ಹಾಳಾಗಿದ್ದರೂ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ರಸ್ತೆ ದುರಸ್ತಿಗೆ ಗಮನಹರಿಸಬೇಕು.

ಸ್ಥಳೀಯ ನಿವಾಸಿಗಳು

ಖಾಲಿ ನಿವೇಶನದಲ್ಲಿ ಕಸ

ಜೆ.ಸಿ.ನಗರದಲ್ಲಿರುವ ಮುನಿರೆಡ್ಡಿಪಾಳ್ಯದ ರಾಜಪ್ಪ ಬ್ಲಾಕ್ನ 1ನೇ ಕ್ರಾಸ್ನಲ್ಲಿರುವ ಖಾಲಿ ನಿವೇಶನದಲ್ಲಿ ಕಸ ಎಸೆಯಲಾಗುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿ ಕಸ ಹೆಚ್ಚಾಗುತ್ತಿದೆ. ಇದರಿಂದಾಗಿ ಕಸದ ರಾಶಿಯಲ್ಲಿ ಇಲಿಗಳು ಸೇರಿಕೊಂಡಿದ್ದು, ಹಾವುಗಳು ಕೂಡ ಬರುತ್ತಿವೆ. ಆದ್ದರಿಂದ ಇಲ್ಲಿ ಕಸ ಹಾಕದಂತೆ ಹಾಗೂ ಈಗ ಇರುವ ಕಸವನ್ನು ತುರ್ತಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು.

ಅ.ನಾ.ರಾವ್ ಜಾದವ್, ರಾಜಪ್ಪ ಬ್ಲಾಕ್

ಮುಖ್ಯರಸ್ತೆಯಲ್ಲೇ ಕಸ

ದೊಡ್ಡಕನ್ನೆಲ್ಲಿಯ ಎ.ಇ.ಟಿ. ಜಂಕ್ಷನ್ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಸಮರ್ಪಕವಾಗಿ ಕಸ ವಿಲೇವಾರಿಯಾಗದ ಕಾರಣ ರಾಶಿ ಬೆಳೆಯುತ್ತಿದೆ. ಕಸ ತಂದು ಎಸೆಯುವವರ ಮೇಲೂ ಯಾವುದೇ ಕ್ರಮ ಕೈಗೊಳ್ಳುತಿಲ್ಲ. ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರ ಅಹವಾಲು ಕೇಳುವವರಿಲ್ಲವಾಗಿದೆ. ಪ್ರದೇಶದ ಸುತ್ತಮುತ್ತ ತ್ಯಾಜ್ಯ ಹರಡಿಕೊಂಡ ಪರಿಣಾಮ ಬೀದಿ ನಾಯಿಗಳ, ಬಿಡಾಡಿ ದನಗಳ ಉಪಟಳ ಹೆಚ್ಚಾಗಿದೆ. ರಾತ್ರಿಹೊತ್ತು ನಡೆದಾಡಲು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸಲು ಭಯ ಪಡಬೇಕಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ.

ವೆಂಕಟ್ರಮಣ ಭಟ್, ದೊಡ್ಡಕನ್ನೆಲ್ಲಿ

ಕೆಟ್ಟುನಿಂತ ಲಿಫ್ಟ್

ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಎದುರು ಹಳೆ ಮದ್ರಾಸ್ ರಸ್ತೆ ದಾಟಲು ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಯ ಲಿಫ್ಟ್ ಅನೇಕ ತಿಂಗಳಿಂದ ಕೆಟ್ಟು ನಿಂತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಿರಿಯ ನಾಗರಿಕರು ಹಾಗೂ ಮಕ್ಕಳು ಮೇಲ್ಸೇತುವೆಯ ಮೆಟ್ಟಿಲು ಹತ್ತಲಾರದೆ, ಸಂಚಾರ ದಟ್ಟಣೆ ಇರುವ ರಸ್ತೆಯನ್ನು ದಾಟಲು ಹರಸಾಹಸ ಪಡುತ್ತಿದ್ದಾರೆ. ವಾಹನಗಳು ವೇಗವಾಗಿ ಬರುವುದರಿಂದ ಇಲ್ಲಿ ರಸ್ತೆ ದಾಟುವುದು ಕಷ್ಟಸಾಧ್ಯವಾಗಿದ್ದು, ಜೀವಕ್ಕೆ ಅಪಾಯವನ್ನು ತಂದೊಡ್ಡುವ ಸಾಧ್ಯತೆಯಿದೆ. ಸಂಬಂಧಪಟ್ಟವರು ಆದಷ್ಟು ಬೇಗೆ ಲಿಫ್ಟ್ ಸರಿಪಡಿಸಬೇಕು.

ನಾಗಪ್ರಸಾದ್ ಎನ್.ಎಸ್., ಹಿರಿಯ ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.