ಬೆಂಗಳೂರು: ಅನ್‌ಲಾಕ್ ನಂತರ ತೆರೆದಿರುವ ರೆಸ್ಟೋರೆಂಟ್‌ಗಳ ನಿರ್ವಹಣೆ ಹೇಗಿರಬೇಕು ಎಂಬುದರ ಬಗ್ಗೆ ಬಿಬಿಎಂಪಿ ಮಾರ್ಗಸೂಚಿ
ಗಳನ್ನು ಬಿಡುಗಡೆ ಮಾಡಿದೆ. ರೆಸ್ಟೋರೆಂಟ್ಸಿಬ್ಬಂದಿಯ ದೇಹದ ಉಷ್ಣಾಂಶವನ್ನುಪ್ರತಿದಿನ ಪರಿಶೀಲಿಸಬೇಕು. ಮನೆಗೆ ಆಹಾರ ಪೂರೈಸುವ ಉದ್ಯೋಗಿಯ ಆರೋಗ್ಯ ತಪಾಸಣೆಯನ್ನು ಪ್ರತಿದಿನ ಮಾಡಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.

‘ಗ್ರಾಹಕರ ನಡುವೆ6 ಅಡಿ ಅಂತರ ಕಾಯ್ದುಕೊಳ್ಳಬೇಕು. ರೆಸ್ಟೋರೆಂಟ್‌ಗಳನ್ನು ಆಗಾಗ ಸ್ಯಾನಿಟೈಸ್ ಮಾಡಬೇಕು. ಶೇ 50ರಷ್ಟು ಆಸನಗಳಲ್ಲಿ ಮಾತ್ರ ಕೂರಲು ಅವಕಾಶ ನೀಡಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವ ಕಾರಣ ಮಾಸ್ಕ್ ಇಲ್ಲದ ಗ್ರಾಹಕರಿಗೆ ಅವಕಾಶ ನೀಡಬಾರದು. ಗ್ರಾಹಕದ ದೇಹದ ಉಷ್ಣಾಂಶ ಪರಿಶೀಲಿಸಿದ ಬಳಿಕವೇ ಒಳಕ್ಕೆ ಬಿಡಬೇಕು’ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದ್ದಾರೆ.

‘ಕೋವಿಡ್–19 ಲಕ್ಷಣ ಇರುವ ಗ್ರಾಹಕರು ಕಂಡರೆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಮಾಹಿತಿ ನೀಡಬೇಕು. ಉಳಿದ ಗ್ರಾಹಕರಿಗೆ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ನಗದು ವಹಿವಾಟು ಕಡಿಮೆ ಮಾಡಿ ಡಿಜಿಟಲ್ ರೂಪಲ್ಲಿ ನಗದು ಪಾವತಿಸಲು ಗ್ರಾಹಕರಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.

65 ವರ್ಷಕ್ಕೂ ಮೇಲ್ಪಟ್ಟವರು, ಆರೋಗ್ಯದಲ್ಲಿ ಏರುಪೇರು ಇರುವವರು, ಗರ್ಭಿಣಿಯರು ಮತ್ತು 10 ವರ್ಷದ ಒಳಗಿನ ಮಕ್ಕಳ ಪ್ರವೇಶವನ್ನು ನಿಯಂತ್ರಿಸಬೇಕು ಎಂದು ಸೂಚಿಸಿದೆ.

‘ರೆಸ್ಟೋರೆಂಟ್ ಅಥವಾ ಮಾಲ್‌ಗಳಲ್ಲಿ ಇರುವ ಆಟಿಕೆ ಸಾಮಾಗ್ರಿಗಳ ಬಳಕೆಗೆ ಅವಕಾಶ ನೀಡಬಾರದು. ಸಿನಿಮಾ ಮಂದಿರಗಳನ್ನು ತೆರೆಯಬಾರದು’ ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.