ಬೆಂಗಳೂರು: ಬದಲಿ ನಿವೇಶನವನ್ನು ಕೋರಿರುವ ಅರ್ಜಿದಾರರಿಗೆ ಒಂದೇ ದಿನದಲ್ಲಿ ವಿವಿಧ ಅಳತೆಯ ಒಟ್ಟು 784 ನಿವೇಶನಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಂಚಿಕೆ ಮಾಡಿದೆ.

ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿದ್ದ ಅರ್ಜಿದಾರರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ‘ರ್ಯಾಂಡಮೈಸೇಷನ್’ ತಂತ್ರಾಂಶದ ಮೂಲಕ ಹಂಚಿಕೆ ಮಾಡಿದರು.

‘ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿದ್ದು, ಸ್ವಾಧೀನ ಪಡೆದುಕೊಳ್ಳದ ಅರ್ಜಿದಾರರಿಗೆ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ’ ಎಂದು ಹ್ಯಾರಿಸ್ ಹೇಳಿದರು.

ಬಿಡಿಎ ಆಯುಕ್ತ ಪಿ. ಮಣಿವಣ್ಣನ್, ಕಾರ್ಯದರ್ಶಿ ಸಿ.ಎಲ್. ಶಿವಕುಮಾರ್, ಹೆಚ್ಚುವರಿ ಕಾರ್ಯದರ್ಶಿ ಎನ್. ಮಂಜುನಾಥ್ ಉಪಸ್ಥಿತರಿದ್ದರು.

ನಿವೇಶನ ಹಂಚಿಕೆ ವಿವರ

ಅಳತೆ; ನಿವೇಶನ ಪಡೆದವರು 20 ಅಡಿ*30 ಅಡಿ (ಇಡಬ್ಲ್ಯೂಎಸ್);113 20 ಅಡಿ*30 ಅಡಿ (ಸಾಮಾನ್ಯ);11 30 ಅಡಿ*40 ಅಡಿ;513 40 ಅಡಿ *60 ಅಡಿ;74 50 ಅಡಿ *80 ಅಡಿ;44 ಸುರಭಿ ಸೇವಾ ಸಂಘ (ಕಂದಾಯ ನಿವೇಶನದಾರರು);29

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.