ಹಣವಿದೆ ನಿವೇಶನ ಇಲ್ಲ: ಶಿವಶಂಕರ್
‘ಅಗ್ನಿಶಾಮಕ ಠಾಣೆ ಸ್ಥಾಪಿಸಲು 15ನೇ ಹಣಕಾಸು ಯೋಜನೆಯಡಿ ನಮ್ಮಲ್ಲಿ ಹಣವಿದೆ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಅಗ್ನಿಶಾಮಕ ಠಾಣೆಗಾಗಿಯೇ ಮೀಸಲಿಟ್ಟರುವ ನಿವೇಶನವನ್ನು ಹಸ್ತಾಂತರಿಸಿ ಎಂದು ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ ಟಿ.ಎನ್. ಶಿವಶಂಕರ ತಿಳಿಸಿದರು.