ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹೊಸ ಮೆನು, ಇಲ್ಲಿದೆ ವಿವರ

ಬಿಸಿಬೇಳೆ ಬಾತ್‌, ಪೊಂಗಲ್‌, ಚೌಚೌಬಾತ್‌, ಬನ್ಸ್‌, ಖೀರು, ಮುದ್ದೆ, ಚಪಾತಿಯ ಆಕರ್ಷಣೆ
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಬಿಬಿಎಂಪಿ ಟೆಂಡರ್‌ ಕರೆದಿದ್ದು, ಆಹಾರದ ಮೆನುವಿನಲ್ಲಿ ರಾಗಿ ಮುದ್ದೆ, ಇಡ್ಲಿ, ಮಂಗಳೂರು ಬನ್ಸ್, ಬಿಸಿಬೇಳೆ ಬಾತ್‌ ಸೇರಿದಂತೆ ಹಲವು ತಿನಿಸುಗಳನ್ನು ನಿಗದಿಪಡಿಸಿದೆ.

ಉಪಾಹಾರದಲ್ಲಿ ಇಡ್ಲಿ, ಪುಲಾವ್, ಬಿಸಿಬೇಳೆ ಬಾತ್‌, ಖಾರಾಬಾತ್‌, ಪೊಂಗಲ್‌, ಬ್ರೆಡ್‌ ಜಾಮ್‌, ಚೌಚೌಬಾತ್‌ ತಿನಿಸುಗಳು ಒಂದೊಂದು ದಿನ ಲಭ್ಯವಾಗಲಿವೆ. ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ರಾಗಿಮುದ್ದೆ, ಚಪಾತಿ, ಅನ್ನ ಸಾಂಬಾರು ಇರಲಿವೆ.

ಮಾವಿನಕಾಯಿ ಲಭ್ಯವಿರುವ ಕಾಲದಲ್ಲಿ ಯಾವುದಾದರೂ ಒಂದು ಉಪಾಹಾರದಲ್ಲಿ ಮಾವಿನಕಾಯಿ ಚಿತ್ರಾನ್ನವನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಲಾಗಿದೆ.

‘ಕಳೆದ 10 ವರ್ಷಗಳಲ್ಲಿ 5 ವರ್ಷ ಆಹಾರ ಪೂರೈಸಿ ಅನುಭವ ಹೊಂದಿರಬೇಕಾದ ಗುತ್ತಿಗೆದಾರರು, ವಿದ್ಯುತ್‌, ನೀರಿನ ಶುಲ್ಕವನ್ನು ಪಾವತಿಸಬೇಕು. ಗ್ರಾಹಕರಿಗೆ ಕುಡಿಯುವ ನೀರು ಒದಗಿಸಬೇಕು. ಸೋಡಾ, ಕೃತಕ ರಾಸಾಯನಿಕ ಬಣ್ಣ, ರುಚಿಕರ ಪೌಡರ್‌, ಅಜಿನೊಮೊಟೊ, ವನಸ್ಪತಿ ಅಥವಾ ಇತರೆ ಕಲುಷಿತ ಎಣ್ಣೆಯನ್ನು ಬಳಸುವಂತಿಲ್ಲ. ಸೋನಾ ಮಸೂರಿ ಪ್ರೀಮಿಯಂ ಗುಣಮಟ್ಟದ ಅಕ್ಕಿ, ಸಫೋಲಾ/ ಧಾರಾ ಅಥವಾ ಅದಕ್ಕೆ ಸಮನಾದ ಸೂರ್ಯಕಾಂತಿ ಎಣ್ಣೆ, ಅನ್ನಪೂರ್ಣ, ಪಿಲ್ಸ್‌ಬರ್ರಿ, ಆಶೀರ್ವಾದ್‌ ಅಥವಾ ಅದಕ್ಕೆ ಸಮನಾದ ಬ್ರ್ಯಾಂಡೆಡ್‌ ಗೋಧಿ ಹಿಟ್ಟನ್ನು ಬಳಸಬೇಕು‘ ಎಂದು ಷರತ್ತು ವಿಧಿಸಲಾಗಿದೆ.

ಜ.16ರಿಂದ ಹೊಸ ಗುತ್ತಿಗೆದಾರರಿಂದ ಹೊಸ ಮೆನು ಒದಗಿಸಲು ಬಿಬಿಎಂಪಿ ಯೋಜಿಸಿದೆ.

ಇಂದಿರಾ ಕ್ಯಾಂಟೀನ್‌ ಮೆನು  

ಉಪಾಹಾರ (ಬೆಳಿಗ್ಗೆ 7ರಿಂದ 10)– ಪ್ಲೇಟ್‌ಗೆ ₹5

ಇಡ್ಲಿ (3/ 150 ಗ್ರಾಂ)– ಸಾಂಬಾರ್ (100 ಎಂ.ಎಲ್‌)

ಇಡ್ಲಿ (3/ 150 ಗ್ರಾಂ)– ಚಟ್ನಿ (100 ಎಂ.ಎಲ್‌)

ವೆಜ್‌ ಪುಲಾವ್ (150 ಗ್ರಾಂ)–  ರಾಯಿತಾ (100 ಎಂ.ಎಲ್‌)

ಬಿಸಿಬೇಳೆ ಬಾತ್‌ (225 ಗ್ರಾಂ)– ಬೂಂದಿ (15 ಗ್ರಾಂ)

ಖಾರಾಬಾತ್‌ (225 ಗ್ರಾಂ)– ಚಟ್ನಿ (100 ಎಂ.ಎಲ್‌)

ಪೊಂಗಲ್‌ (225 ಗ್ರಾಂ)– ಚಟ್ನಿ (100 ಎಂ.ಎಲ್‌)

ಖಾರಾಬಾತ್ (150 ಗ್ರಾಂ)–ಚಟ್ನಿ(100 ಎಂ.ಎಲ್‌)– ಕೇಸರಿಬಾತ್ (75 ಗ್ರಾಂ).

ಬ್ರೆಡ್‌– ಜಾಮ್‌ (2 ಪೀಸ್)

ಮಂಗಳೂರು ಬನ್ಸ್‌ (1 ಪೀಸ್‌/ 40–50 ಗ್ರಾಂ)

ಬನ್ಸ್‌ (1 ಪೀಸ್‌/ 40–50 ಗ್ರಾಂ)

ಮಧ್ಯಾಹ್ನದ ಊಟ (ಮಧ್ಯಾಹ್ನ 1ರಿಂದ 3)– ಪ್ಲೇಟ್‌ಗೆ ₹10

ಅನ್ನ (300 ಗ್ರಾಂ)– ತರಕಾರಿ ಸಾಂಬಾರು (150 ಗ್ರಾಂ), ಖೀರು (75 ಎಂ.ಎಲ್‌)

ಅನ್ನ (300 ಗ್ರಾಂ)– ತರಕಾರಿ ಸಾಂಬಾರು (150 ಗ್ರಾಂ), ರಾಯಿತಾ (100 ಎಂ.ಎಲ್‌)

ಅನ್ನ (300 ಗ್ರಾಂ)– ತರಕಾರಿ ಸಾಂಬಾರು (150 ಗ್ರಾಂ), ಮೊಸರನ್ನ (100 ಎಂ.ಎಲ್‌)

ರಾಗಿ ಮುದ್ದೆ (2/ 100 ಗ್ರಾಂ)– ಸೊಪ್ಪಿನ ಸಾರು, ಖೀರು (75 ಎಂ.ಎಲ್)

ಚಪಾತಿ (2/ 40 ಗ್ರಾಂ)– ಸಾಗು, ಖೀರು (75 ಎಂ.ಎಲ್‌)

ರಾತ್ರಿ ಊಟ (ಸಂಜೆ 7.30ರಿಂದ ರಾತ್ರಿ 9)– ಪ್ಲೇಟ್‌ಗೆ ₹10

ಅನ್ನ (300 ಗ್ರಾಂ)– ತರಕಾರಿ ಸಾಂಬಾರು (150 ಗ್ರಾಂ)

ಅನ್ನ (300 ಗ್ರಾಂ)– ತರಕಾರಿ ಸಾಂಬಾರು (150 ಗ್ರಾಂ), ರಾಯಿತಾ (100 ಎಂ.ಎಲ್‌)

ರಾಗಿ ಮುದ್ದೆ (2)– ಸೊಪ್ಪಿನ ಸಾರು

ಚಪಾತಿ (2)– ವೆಜ್‌ ಗ್ರೇವಿ

*ಪೂರ್ವ ಹಾಗೂ ಯಲಹಂಕ ವಲಯದಲ್ಲಿರುವ 51 ಇಂದಿರಾ ಕ್ಯಾಂಟೀನ್‌, 4 ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳ ಎರಡು ವರ್ಷದ ಗುತ್ತಿಗೆ ಮೊತ್ತ ₹35.92 ಕೋಟಿ.

*ಪಶ್ಚಿಮ ಹಾಗೂ ದಾಸರಹಳ್ಳಿ ವಲಯದಲ್ಲಿರುವ 45 ಇಂದಿರಾ ಕ್ಯಾಂಟೀನ್‌, 5 ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳ ಎರಡು ವರ್ಷದ ಗುತ್ತಿಗೆ ಮೊತ್ತ ₹36.48 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT