ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಸ ಸುರಿವ ತಾಣ ತೆರವಿಗೆ ಯೋಜನೆ

76 ಸ್ಥಳಗಳನ್ನು ಸುಂದರಗೊಳಿಸುವ ಯೋಜನೆಗೆ ₹6.18 ಕೋಟಿ ವೆಚ್ಚ: ಬಿಬಿಎಂಪಿ
Last Updated 13 ಜೂನ್ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಮನೆಗಳಲ್ಲಿ ಉತ್ಪತ್ತಿ ಯಾಗುವ ಕಸ ಸಂಗ್ರಹಣೆ ಮತ್ತು ಸಾಗಣೆಗೆ ಪ್ರತಿ ತಿಂಗಳು ಅಂದಾಜು ₹50 ಕೋಟಿ ವೆಚ್ಚ ಮಾಡುವ ಬಿಬಿಎಂಪಿ, ಕಸ ಸುರಿಯುವ ತಾಣ(ಬ್ಲಾಕ್ ಸ್ಪಾಟ್) ತೆರವಿಗೆ ₹6.18 ಕೋಟಿ ಮೊತ್ತದ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಈ ರೀತಿಯ 76 ಸ್ಥಳಗಳನ್ನು ಸುಂದರ ತಾಣವಾಗಿ ಪರಿವರ್ತಿಸಲು ಯೋಜನೆ ರೂಪಿಸಿದೆ.

‘ಶುಭ್ರ ಬೆಂಗಳೂರು ಕಾರ್ಯಕ್ರಮದ ಭಾಗವಾಗಿ ಈ ಯೋಜನೆ ಕೈಗೆತ್ತಿಕೊಳ್ಳ ಲಾಗಿದೆ. ಇಡೀ ಬಿಬಿಎಂಪಿ ವ್ಯಾಪ್ತಿಯಲ್ಲಿ ರುವ ಈ ರೀತಿಯ ತಾಣಗಳನ್ನು ನಿರ್ಮೂಲನೆ ಮಾಡುವುದು ಇದರ ಉದ್ದೇಶ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಘನತ್ಯಾಜ್ಯ ನಿರ್ವಹಣೆ)ಡಾ.ಹರೀಶ್‌ಕುಮಾರ್‌ ತಿಳಿಸಿದರು.

‘ಪ್ರತಿದಿನ ಸ್ವಚ್ಛಗೊಳಿಸುವ ಸುಮಾರು 1,479 ಸ್ಥಳಗಳನ್ನು ಗುರು ತಿಸಿದ್ದೇವೆ. ಅಲ್ಲಿ ಪ್ರತಿದಿನವೂ ಕಸ ತೆಗೆಯಲಾಗುತ್ತಿದೆ. ಶಾಶ್ವತವಾಗಿ ಕಸ ಇರುವ ತಾಣವಾಗಿದ್ದ 118 ಸ್ಥಳಗಳನ್ನು ಈಗ 76ಕ್ಕೆ ಇಳಿಸಲಾಗಿದೆ. ಇವುಗಳು ಇಲ್ಲದಂತೆ ಮಾಡುವುದು ಹೊಸ ಯೋಜನೆಯ ಉದ್ದೇಶ’ ಎಂದು ಹೇಳಿದರು.

‘ಆ ಜಾಗದ ಸೌಂದರ್ಯ ಹೆಚ್ಚಿಸು ವುದು ಮತ್ತು ಮೂರು ತಿಂಗಳು ಕಾವಲಿದ್ದು (ಕಾವಲುಗಾರರ ನೇಮಕ ಅಥವಾ ಸಿಸಿಟಿವಿ ಕ್ಯಾಮೆರಾ ಅಳವಡಿಕೆ) ಕಸ ಸುರಿಯದಂತೆ ನೋಡಿಕೊಳ್ಳುವುದು ಕೂಡ ಈ ಯೋಜನೆಯಲ್ಲಿ ಸೇರಿದೆ. ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲೇ ಅಂತಿಮ ಗೊಳಿಸಲಾಗುವುದು’ ಎಂದರು.

‘ಈಗಿರುವ ಕಸ ನಿರ್ಹವಹಣೆ ಗುತ್ತಿಗೆಯಲ್ಲಿ ಮನೆ–ಮನೆಯಿಂದ ಕಸ ಸಂಗ್ರಹಿಸಿ ನೆಲಭರ್ತಿ ಘಟಕಕ್ಕೆ ಸಾಗಿಸುವುದಷ್ಟೇ ಸೇರಿತ್ತು. ರಸ್ತೆ ಬದಿ ಬೀಳುವ ಕಸ, ಪ್ರಾಣಿಗಳ ತ್ಯಾಜ್ಯಕ್ಕೆ ಆ ಗುತ್ತಿಗೆದಾರರು ಹೊಣೆಗಾರರಾಗಿರಲಿಲ್ಲ. ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದ್ದು, ಹೊಸ ಗುತ್ತಿಗೆಯಲ್ಲಿ ಈ ಎಲ್ಲವನ್ನೂ ಸೇರಿಸಲಾಗುತ್ತಿದೆ. ಅದು ಜಾರಿಗೆ ಬರಲು ಕೆಲವು ತಿಂಗಳು ಬೇಕಾಗುತ್ತದೆ. ಆ ತನಕ ಕಸ ಸುರಿಯುವ ತಾಣಗಳನ್ನು ತೆರವುಗೊಳಿಸ ಬೇಕಾಗಿದೆ. ಆದ್ದರಿಂದ ಈ ಯೋಜನೆ ರೂಪಿಸಲಾಗಿದೆ’ ಎಂದು ವಿವರಿಸಿದರು.

ಹೊಸ ಟೆಂಡರ್ ಅಂತಿಮಗೊಳಿಸಲು ವಾರ್ಡ್‌ಗಳ ಮರು ವಿಂಗಡಣೆಪ್ರಕ್ರಿಯೆಯನ್ನು ಕಾಯಲಾಗುತ್ತಿದೆ. ಹೊಸದಾಗಿ ವಾರ್ಡ್‌ಗಳು ರಚನೆಯಾದ ಬಳಿಕ ಟೆಂಡರ್ ಅಂತಿಮಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT