ಬೆಂಗಳೂರು: ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಕಾವಲುಗಾರನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ಉಪನಗರ ನಿವಾಸಿ ಎಸ್.ಉಷಾರಾಣಿ ಅವರ ದೂರು ಆಧರಿಸಿ ವಿಶಾಲ್ ಮೆಗಾ ಮಾರ್ಟ್ನ ಕಾವಲುಗಾರ ಚಂದ್ರಹಾಸ ಎಂಬಾತನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

‘ಮೀನಿನ ಅಂಗಡಿ ಜಾಗದ ವಿಚಾರಕ್ಕೆ ಆರೋಪಿ ಹಾಗೂ ಮಹಿಳೆ ನಡುವೆ ಜಗಳ ನಡೆದಿದೆ. ಈ ವಿಷಯವಾಗಿ ಆತನಿಗೆ ಬುದ್ಧಿ ಹೇಳಿಸುವ ಸಲುವಾಗಿ ಮಾರ್ಟ್ನ ವ್ಯವಸ್ಥಾಪಕರಿಗೆ ದೂರು ಹೇಳಲು ಮಹಿಳೆ ಹೋದ ಸಂದರ್ಭದಲ್ಲಿ ಚಂದ್ರಹಾಸ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಯು ಚೂಪಾದ ವಸ್ತುವಿನಿಂದ ಕಿವಿ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದು ಗಾಯ ಮಾಡಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದ ಬಳಿಕ ದೂರು ನೀಡಿದ್ದೇನೆ. ಸಾರ್ವಜನಿಕರು 112ಕ್ಕೆ ಕರೆ ಮಾಡಿದ್ದರಿಂದ ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.