ಹೊರವರ್ತುಲ ರಸ್ತೆಯ ಇಬ್ಬಲೂರು ಬಳಿ ವಾಹನಗಳು ಆಮೆಗತಿಯಲ್ಲಿ ಸಾಗಿದವು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕೋರಮಂಗಲದಲ್ಲಿ ಕಚೇರಿ ಇರುವುದರಿಂದ ಬೆಳಿಗ್ಗೆ ಬರುವ ಹೊತ್ತಿಗೆ ಸೇಂಟ್ ಜಾನ್ಸ್ ವೃತ್ತದಲ್ಲಿ ದಟ್ಟಣೆ ಇರುತ್ತದೆ. ಸಂಜೆ ವೇಳೆಯಂತೂ ಇದು ಮೂರು ಪಟ್ಟು ಹೆಚ್ಚುತ್ತದೆ. ಸಂಚಾರ ನಿರ್ವಹಣೆಗೆ ಇಲ್ಲಿ ವಿಶೇಷ ಒತ್ತು ನೀಡಲೇಬೇಕು.
-ತ್ರಿಷ್ಮಾ, ಖಾಸಗಿ ಉದ್ಯೋಗಿ
ಸಿಂಗಸಂದ್ರದ ಮನೆಯಿಂದ ಕೋರಮಂಗಲ ಆರು ಕಿ.ಮೀ. ದೂರವಿದೆ. ಆದರೂ ಕಚೇರಿಗೆ ಪತ್ನಿಯನ್ನು ಬಿಡಲು 1 ಗಂಟೆ ಬೇಕಾಗುತ್ತದೆ. ಮಡಿವಾಳದಲ್ಲಿ ಯು ಟರ್ನ್ ಇದ್ದರೂ ಸಂಚಾರಕ್ಕೆ ಅವಕಾಶ ನೀಡದಿರುವುದರಿಂದ ದಟ್ಟಣೆ ಹೆಚ್ಚಾಗಿದೆ