ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಐದನೇ ರೈಲು ಈ ತಿಂಗಳ ಅಂತ್ಯಕ್ಕೆ ತಲುಪಲಿದೆ. ಅಕ್ಟೋಬರ್ ಮೂರನೇ ವಾರದಲ್ಲಿ ಈ ರೈಲು ಸಂಚಾರ ಆರಂಭಿಸಲಿದ್ದು, ಪ್ರತಿ ಟ್ರಿಪ್ನ ಅಂತರವು 15 ನಿಮಿಷಕ್ಕೆ ಇಳಿಯಲಿದೆ.

ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್ಎಸ್ಎಲ್) ಕಾರ್ಯಾಗಾರದಿಂದ ಐದನೇ ರೈಲು ಕೋಚ್ಗಳ ರವಾನೆಯಾಗಿದೆ. ಹೆಬ್ಬಗೋಡಿಯಲ್ಲಿರುವ ನಮ್ಮ ಮೆಟ್ರೊ ಡಿಪೊಗೆ ತಲುಪಿದ ಬಳಿಕ ಇನ್ಸ್ಪೆಕ್ಷನ್ ಬೇ ಲೈನ್ನಲ್ಲಿ ಆರಂಭಿಕ ಸ್ಥಿರ ಪರೀಕ್ಷೆಗಳು ನಡೆಯಲಿವೆ. ಬಳಿಕ ಎರಡು ವಾರ ವಾಣಿಜ್ಯ ಮಾರ್ಗದಲ್ಲಿ ರಾತ್ರಿ ವೇಳೆ ಪರೀಕ್ಷೆಗಳು ನಡೆಯಲಿವೆ. ಆ ನಂತರ ಸಂಚಾರಕ್ಕೆ ಲಭ್ಯವಾಗಲಿದೆ.

ಟಿಆರ್ಎಸ್ಎಲ್ 36 ರೈಲುಗಳನ್ನು ತಯಾರಿಸಲಾಗುತ್ತಿದೆ. ಅದರಲ್ಲಿ 34 ರೈಲುಗಳು ಬಿಎಂಆರ್ಸಿಎಲ್ಗೆ ಬರಲಿವೆ. 14 ರೈಲುಗಳು ಹಳದಿ ಮಾರ್ಗಕ್ಕೆ ಬಳಕೆಯಾಗಲಿವೆ. ಹಸಿರು ಮತ್ತು ನೇರಳೆ ಮಾರ್ಗದಲ್ಲಿರುವ ರೈಲುಗಳ ಕೊರತೆಯನ್ನು ಉಳಿದವುಗಳು ನೀಗಿಸಲಿವೆ. ಈಗಾಗಲೇ ನೇರಳೆ ಮಾರ್ಗಕ್ಕೆ ಒಂದು ಮತ್ತು ಹಳದಿ ಮಾರ್ಗಕ್ಕೆ ನಾಲ್ಕು ರೈಲು ಕೋಚ್ಗಳು ಪೂರೈಕೆಯಾಗಿವೆ.

ಆರ್.ವಿ. ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರವನ್ನು ಕೇವಲ ಮೂರು ಕೋಚ್ಗಳೊಂದಿಗೆ (ಆರು ಬೋಗಿಗಳ ಒಂದು ಸೆಟ್ ಒಂದು ಕೋಚ್) ಆ.11ಕ್ಕೆ ಆರಂಭಿಸಲಾಗಿತ್ತು. ಆಗ 25 ನಿಮಿಷಕ್ಕೊಂದರಂತೆ ಟ್ರಿಪ್ಗಳಿದ್ದವು. ಒಂದು ತಿಂಗಳ ಬಳಿಕ ನಾಲ್ಕನೇ ರೈಲು ಓಡಾಟ ಆರಂಭವಾದ ಮೇಲೆ ಟ್ರಿಪ್ಗಳ ನಡುವಿನ ಅಂತರ 19 ನಿಮಿಷಕ್ಕೆ ಇಳಿದಿತ್ತು. ಐದನೇ ರೈಲು ಬಂದಾಗ ಇನ್ನೂ ನಾಲ್ಕು ನಿಮಿಷ ಕಡಿಮೆಯಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿದ ಜನಸಂಚಾರ:

ಹಳದಿ ಮಾರ್ಗದಲ್ಲಿ ಟ್ರಿಪ್ಗಳ ನಡುವಿನ ಅಂತರ ಹೆಚ್ಚಿರುವುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇರಬಹುದು. ಆರಂಭದಲ್ಲಿ 25 ಸಾವಿರ ಜನರು ಪ್ರಯಾಣಿಸಬಹುದು. ವಿಶೇಷ ದಿನಗಳಲ್ಲಿ ಗರಿಷ್ಠ 50 ಸಾವಿರವರೆಗೆ ತಲುಪಬಹುದು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಅಂದಾಜಿಸಿದ್ದರು. ಆದರೆ, ನಿರೀಕ್ಷೆ ಮೀರಿ ಪ್ರಯಾಣಿಕರಿಂದ ಸ್ಪಂದನೆ ದೊರೆತಿದೆ. ಮೊದಲು ಸರಾಸರಿ 8.30 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಸಂಚರಿಸುತ್ತಿದ್ದರೆ ಹಳದಿ ಮಾರ್ಗ ಆರಂಭವಾದ ಮೇಲೆ ಪ್ರಯಾಣಿಕರ ಪ್ರಮಾಣ ಸರಾಸರಿ 9.50 ಲಕ್ಷಕ್ಕೆ ತಲುಪಿದೆ. ಪ್ರತಿ ವಾರದಲ್ಲಿ ಎರಡು–ಮೂರು ದಿನ ಹತ್ತು ಲಕ್ಷದ ಗಡಿ ದಾಟುತ್ತಿದೆ.

ಐಟಿ ಹಬ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಗೆ ವಿಪರೀತ ವಾಹನದಟ್ಟನೆಯಿಂದಾಗಿ ರಸ್ತೆ ಮೂಲಕ ಸಾಗುವುದೇ ಹರಸಾಹಸ ಆಗಿರುವುದರಿಂದ ಜನರು ಮೆಟ್ರೊ ಮೂಲಕ ಸಂಚರಿಸಲು ಬಯಸುತ್ತಿದ್ದಾರೆ. ರೈಲು ಕೋಚ್ಗಳ ಸಂಖ್ಯೆ ಹೆಚ್ಚಿದಂತೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಲಿದೆ ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ರಮಾನಂದ್ ಮಾಹಿತಿ ನೀಡಿದರು.

ನವೆಂಬರ್ನಲ್ಲಿ 6ನೇ ರೈಲು

ಅಕ್ಟೋಬರ್ ಕೊನೇ ವಾರದಲ್ಲಿ ಆರನೇ ರೈಲು ಕೋಚ್ ಟಿಆರ್ಎಸ್ಎಲ್ನಿಂದ ರವಾನೆಯಾಗಲಿದೆ. ನವೆಂಬರ್ ಮೊದಲ ವಾರದಲ್ಲಿ ಹೆಬ್ಬಗೋಡಿ ಡಿಪೊ ತಲುಪಲಿದೆ. ನವೆಂಬರ್ ಅಂತ್ಯದಲ್ಲಿ ಏಳು ಮತ್ತು ಎಂಟನೇ ರೈಲು ಕೋಚ್ಗಳು ರವಾನೆಯಾಗಲಿವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.