ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Namma Metro | ಐಪಿಎಲ್‌ ಟೂರ್ನಿ: ರಾತ್ರಿ 1.30ರ ತನಕ ಮೆಟ್ರೊ ರೈಲು ಕಾರ್ಯಾಚರಣೆ

Last Updated 31 ಮಾರ್ಚ್ 2023, 13:19 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್ ಪಂದ್ಯಾವಳಿ ನಗರದಲ್ಲಿ ನಡೆಯುವ ದಿನಗಳಂದು ಮಧ್ಯರಾತ್ರಿ 1.30ರ ತನಕ ಮೆಟ್ರೊ ರೈಲುಗಳ ಕಾರ್ಯಾಚರಣೆ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್‌) ನಿರ್ಧರಿಸಿದೆ.

ಏಪ್ರಿಲ್ 2, 10, 17, 26 ಮತ್ತು ಮೇ 21ರಂದು ಬೆಂಗಳೂರಿನಲ್ಲಿ ಪಂದ್ಯಾವಳಿಗಳು ಆಯೋಜನೆಗೊಂಡಿವೆ. ಬೈಯಪ್ಪನಹಳ್ಳಿ–ಕೆಂಗೇರಿ, ನಾಗಸಂದ್ರ–ರೇಷ್ಮೆ ಸಂಸ್ಥೆ ಮಾರ್ಗಗಳ ರೈಲುಗಳ ಸಂಚಾರ ಅವಧಿ ವಿಸ್ತರಿಸಲಾಗಿದೆ. ಕೊನೆಯ ನಿಲ್ದಾಣಗಳಿಂದ(ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ) ರಾತ್ರಿ 1 ಗಂಟೆಗೆ ಕೊನೆಯ ರೈಲುಗಳು ಹೊರಡಲಿವೆ.

ಮೆಜೆಸ್ಟಿಕ್ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕೂ ರೈಲುಗಳು 1.30 ಗಂಟೆಗೆ ಕೊನೆಯ ನಿಲ್ದಾಣಗಳತ್ತ ಹೊರಡಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ವಿಸ್ತರಿತ ಅವಧಿಯಲ್ಲಿ ಪ್ರಯಾಣಿಸಲು ಟೋಕನ್, ಕ್ಯೂಆರ್‌ ಕೋಡ್ ಟಿಕೆಟ್‌ ಮತ್ತು ಸ್ಮಾರ್ಟ್‌ ಕಾರ್ಡ್‌ಗಳನ್ನು ಬಳಸಬಹುದು. ಪಂದ್ಯಾವಳಿ ಮುಗಿದ ಬಳಿಕ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲ ಆಗುವಂತೆ ವಾಪಸ್‌ ಪ್ರಯಾಣಕ್ಕೆ ಪೇಪರ್‌ ಟಿಕೆಟ್‌ಗಳನ್ನು ಖರೀದಿಸಬಹುದು.

ಎಲ್ಲಾ ನಿಲ್ದಾಣಗಳಲ್ಲಿ ಮಧ್ಯಾಹ್ನ 3.30 ಗಂಟೆಯಿಂದ ಪೇಪರ್‌ ಟಿಕೆಟ್ ಲಭ್ಯ ಇರಲಿವೆ. ₹50 ದರದ ಪೇಪರ್‌ ಟಿಕೆಟ್‌ಗಳನ್ನು ಕಬ್ಬನ್ ಪಾರ್ಕ್ ಮತ್ತು ಎಂ.ಜಿ.ರಸ್ತೆ ನಿಲ್ದಾಣಗಳಿಂದ ರಾತ್ರಿ 8 ಗಂಟೆಯ ಬಳಿಕ ಬಳಕೆ ಮಾಡಬಹುದಾಗಿದೆ ಎಂದು ವಿವರಿಸಿದೆ.

ವೈಟ್‌ಫೀಲ್ಡ್‌–ಕೆ.ಆರ್‌.ಪುರ ನಡುವಿನ ಹೊಸ ಮಾರ್ಗಕ್ಕೆ ಈ ವಿಸ್ತರಿತ ಅವಧಿ ಅನ್ವಯವಾಗುವುದಿಲ್ಲ. ಎಂದಿನಂತೆ ರಾತ್ರಿ 11 ಗಂಟೆಗೆ ಈ ಎರಡೂ ನಿಲ್ದಾಣಗಳಿಂದ ಕೊನೆಯ ರೈಲುಗಳು ಹೊರಡಲಿವೆ ಎಂದು ಸ್ಪಷ್ಟಪಡಿಸಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT