ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲ್ಲಲ್ಲಿ ಗೋಪೂಜೆ ಹಾಗೂ ಕಿಚ್ಚು ಹಾಯಿಸುವ ಕಾರ್ಯಕ್ರಮಗಳು ಮಂಗಳವಾರ ನಡೆದವು.

ಹಬ್ಬದ ಅಂಗವಾಗಿ ಮನೆ ಮನೆಗಳೂ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಚಿಣ್ಣರು, ಮಹಿಳೆಯರು ಹೊಸ ಬಟ್ಟೆ ತೊಟ್ಟು, ಎಳ್ಳು–ಬೆಲ್ಲ ಮತ್ತು ಕಬ್ಬಿನ ಜಲ್ಲೆಯನ್ನು ಹಂಚಿ ಸಂಭ್ರಮಿಸಿದರು. ಹಬ್ಬಕ್ಕೆ ರಜೆ ನೀಡಿದ್ದರಿಂದ ಬಹುತೇಕರು ಮನೆಯಲ್ಲಿಯೇ ಪೊಂಗಲ್ ತಯಾರಿಸಿ, ಕುಟುಂಬದ ಸದಸ್ಯರು ಒಟ್ಟಾಗಿ ಸವಿದರು. ನಗರದ ಮೈದಾನಗಳಲ್ಲಿ ನಡೆದ ರಾಸುಗಳಿಗೆ ಕಿಚ್ಚು ಹಾಯಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಧಾನ್ಯಗಳ ರಾಶಿ ಪೂಜೆಗಳು ಹಬ್ಬದ ಸಂಭ್ರಮ ಹೆಚ್ಚಿಸಿದವು.

ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನ, ಮಲ್ಲೇಶ್ವರದ ಲಕ್ಷ್ಮಿ ನರಸಿಂಹ ದೇವಸ್ಥಾನ, ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ, ಕೆ.ಆರ್.ಮಾರುಕಟ್ಟೆಯ ಕೋಟೆ ಪ್ರಸನ್ನ ವೆಂಕಟರಮಣ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಯಶವಂತಪುರ ಸರ್ಕಲ್ನ ಗಾಯತ್ರಿ ದೇವಸ್ಥಾನ, ಜೆ.ಪಿ.ನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನ, ಬನಶಂಕರಿಯ ದೇವಗಿರಿ ವೆಂಕಟೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಜನರು ನಿಂತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಭಕ್ತರಿಗೆ ಪೊಂಗಲ್ ಮತ್ತು ಕೋಸಂಬರಿ ಪ್ರಸಾದ ನೀಡಲಾಯಿತು.

ಸಂಕ್ರಾಂತಿ ಸುಗ್ಗಿ: ಮಾಗಡಿ ಮುಖ್ಯರಸ್ತೆಯ ಅಂಜನಾ ನಗರ ಬಳಿಯ ಬಿಇಎಲ್ ಬಡಾವಣೆಯಲ್ಲಿರುವ ಶಾಸಕರ ಕಚೇರಿ ಮುಂಭಾಗ ಗ್ರಾಮೀಣ ಸೊಗಡಿನ ‘ಸಂಕ್ರಾಂತಿ ಸುಗ್ಗಿ ಉತ್ಸವ’ ನಡೆಯಿತು. ಶಾಸಕ ಎಸ್.ಟಿ.ಸೋಮಶೇಖರ್ ಅವರು ಗೋಪೂಜೆ ನಡೆಸಿ, ದವಸ ಧಾನ್ಯಗಳಿಗೆ ಪೂಜೆ ಮಾಡುವ ಮೂಲಕ ಉತ್ಸವ ಉದ್ಘಾಟಿಸಿದರು. ಸಾವಿರಾರು ನಾಗರಿಕರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಉತ್ಸವ ಆಚರಿಸಲಾಯಿತು. ಜಾನಪದ ನೃತ್ಯಗಳು ಉತ್ಸವದ ಮೆರಗು ಹೆಚ್ಚಿಸಿತು.

ರಾಜರಾಜೇಶ್ವರಿನಗರ, ಮಲ್ಲೇಶ್ವರ ಆಟದ ಮೈದಾನ, ಮತ್ತಿಕೆರೆ, ಯಶವಂತಪುರ, ಯಲಹಂಕ ಉಪನಗರ, ಪದ್ಮನಾಭ ನಗರದಲ್ಲಿ ವಿವಿಧ ಸಂಸ್ಥೆಗಳು ಬೆಂಕಿಯ ಕಿಚ್ಚಿನ ಮೇಲೆ ದನಗಳನ್ನು ಹಾಯಿಸುವ ಆಚರಣೆ ನಡೆಸಿದವು.

ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಜಯನಗರದ ಕಿತ್ತೂರ ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ‘ಸುಗ್ಗಿ ಹುಗ್ಗಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೊಂಗಲ್ ತಯಾರಿಸಿ, ಪೌರಕಾರ್ಮಿಕರಿಗೆ ವಿಶೇಷ ಕ್ರೀಡೆಗಳನ್ನು ನಡೆಸಲಾಯಿತು. ಸಮಿತಿ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಪಾಲ್ಗೊಂಡಿದ್ದರು.

ಉಲ್ಲಾಳು ವಾರ್ಡ್ ನಾಗರಿಕರ ವೇದಿಕೆಯು ನಗೆ ಮನೆಯಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮಾಚರಣೆ ನಡೆಸಿತು. ಬೆಳಿಗ್ಗೆ ಅವರೆ ಮೇಳ ಮತ್ತು ಶಾಪಿಂಗ್ ಉತ್ಸವ ನಡೆಯಿತು. ಸಂಜೆ ಗೋಪೂಜೆ ಮಾಡಲಾಯಿತು. ಜಾನಪದ ಕಲಾ ತಂಡಗಳು ಮತ್ತು ಮಂಗಳವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಹಸುಗಳನ್ನು ಕಿಚ್ಚು ಹಾಯಿಸುವ ಆಚರಣೆಗಳೂ ನಡೆದವು. ಶಿರಡಿ ಸಾಯಿಬಾಬಾ ಅವರ ಜೀವನ ಚರಿತ್ರೆಯ ನೃತ್ಯ ರೂಪಕ ‘ಸಬ್ ಕಾ ಮಾಲೀಕ್ ಏಕ್ ಹೈ’ ನೃತ್ಯ ರೂಪಕ ನಾಟಕವು ರಾತ್ರಿ ಪ್ರದರ್ಶನ ಕಂಡಿತು.

ಗೋಚರಿಸದ ಸೂರ್ಯ ರಶ್ಮಿ

ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗಕ್ಕೆ ಸೂರ್ಯ ರಶ್ಮಿಯ ಸ್ಪರ್ಶವು ಈ ಬಾರಿ ಮೋಡದಿಂದಾಗಿ ಗೋಚರಿಸಿಲ್ಲ. ಸೂರ್ಯ ತನ್ನ ಪಥ ಬದಲಿಸುವ ಸಂದರ್ಭದಲ್ಲಿ ಸಂಜೆ 5.14ರಿಂದ 5.17ರ ಅವಧಿಯಲ್ಲಿ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತಾಧಿಗಳು ದೇವಾಲಯದ ಮುಂದೆ ಕಾದು ಕುಳಿತಿದ್ದರು. ಆದರೆ ಮೋಡ ಕವಿದ ವಾತಾವರಣದಿಂದಾಗಿ ಭಕ್ತರಿಗೆ ನಿರಾಸೆಯಾಯಿತು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೇಗುಲದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ‘ಈ ಬಾರಿ ಸೂರ್ಯನ ಕಿರಣಗಳು ಅಗೋಚರವಾಗಿತ್ತು. ಸೂರ್ಯ ಗವಿಗಂಗಾಧರ ಕ್ಷೇತ್ರವನ್ನು ಪ್ರವೇಶಿಸಿದ್ದು ಪ್ರಕೃತಿ ವಿಕೋಪದಿಂದಾಗಿ ನಮಗೆ ನೋಡಲು ಸಾಧ್ಯವಾಗಿಲ್ಲ. ಭಕ್ತರು ಆತಂಕ ಪಡುವು ಅವಶ್ಯಕತೆ ಇಲ್ಲ. ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಯಾವುದೇ ಅನಾಹುತ ನಡೆಯುವುದಿಲ್ಲ. ಅಲ್ಲಲ್ಲಿ ಜಲ ಸಂಕಟಗಳು ನಡೆಯುವ ಸಾಧ್ಯತೆಯಿದೆ’ ಎಂದು ಹೇಳಿದರು.

ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ

ದಾಬಸ್ ಪೇಟೆ: ಮಕರ ಸಂಕ್ರಮಣದಂದು ಶಿವಗಂಗೆಯಲ್ಲಿ ‘ಗಿರಿಜಾ ಕಲ್ಯಾಣೋತ್ಸವ (ಗಂಗಪ್ಪನ ಧಾರೆ)’ ಸಂಭ್ರಮದಿಂದ ನಡೆಯಿತು. ಮಧ್ಯಾಹ್ನ 2.39ಕ್ಕೆ ಬೆಟ್ಟದ ಕುಕದ್ಗಿರಿ ಶಿಖರದಲ್ಲಿ ತೀರ್ಥೋದ್ಭವವಾಯಿತು. ನಂತರ, ಗಂಗಾಧರೇಶ್ವರ ದೇವಾಲಯದಲ್ಲಿ ಗಂಗಾಧರೇಶ್ವರ– ಪಾರ್ವತಿಗೂ ವಿವಾಹ ಮಾಡಿ, ‘ಗಿರಿಜಾ ಕಲ್ಯಾಣ ಮಹೋತ್ಸವ’ ನೆರವೇರಿಸಲಾಯಿತು.

ಶಿವಗಂಗೆ ಬೆಟ್ಟದಲ್ಲಿ ಅತಿಹೆಚ್ಚು ಭಕ್ತರು ಸೇರಿದ್ದರು. ಭಕ್ತರು ಅರವಟ್ಟಿಗೆಗಳ ಮೂಲಕ ನೀರು, ಮಜ್ಜಿಗೆ, ಹೆಸರುಬೇಳೆ, ಪಾನಕ ವಿತರಿಸಿದರು. ಆಗಮಿಕ ಸೋಮಸುಂದರ್ ದೀಕ್ಷಿತ್ ಅವರ ತಂಡ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.