ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಆಟಗಾರರ ಸಂಭ್ರಮಾಚರಣೆ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಮನ್ವಯದ ಕೊರತೆ, ಅಸಮರ್ಪಕ ವ್ಯವಸ್ಥೆ ಹಾಗೂ ಸ್ಪಷ್ಟತೆಯ ಕೊರತೆ ಸೇರಿದಂತೆ ಹಲವು ಅಂಶಗಳು ಕಾರಣವಾಗಿವೆ ಎನ್ನಲಾಗುತ್ತಿದೆ.

ದುರಂತದ ಬಗ್ಗೆ ಪ್ರಜಾವಾಣಿಯೊಂದಿಗೆ ಮಾತನಾಡಿರುವ ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು, 'ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ, ರ್ಯಾಲಿ ನಡೆಯುವ ಬಗ್ಗೆ ಹೆಚ್ಚಿನ ಪೊಲೀಸರಿಗೆ ಮಾಹಿತಿಯೇ ಇರಲಿಲ್ಲ. ಅದೇರೀತಿ, ಆಯೋಜಕರು ಹಾಗೂ ನಮ್ಮ (ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರ) ನಡುವೆ ಸಂವಹನದ ಕೊರತೆ ಇತ್ತು' ಎಂದು ತಿಳಿಸಿದ್ದಾರೆ

ಕ್ರೀಡಾಂಗಣದ ಗೇಟ್ ಬಳಿ ಕೆಲವೇ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಜನಸಂದಣಿಯನ್ನು ನಿರ್ವಹಿಸಲು ಸಾಕಾಗುವಷ್ಟು ಪೊಲೀಸರು ಸ್ಥಳದಲ್ಲಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು.

'ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಒತ್ತಡವನ್ನು ತಗ್ಗಿಸಬೇಕಿತ್ತು. ಮಾಹಿತಿ ಕೊರತೆಯಿಂದಾಗಿ ಅದು ಸಾಧ್ಯವಾಗಿಲ್ಲ' ಎಂದು ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದಾರೆ.
.‘ಜಂಗುಳಿ...ಮಾಡೋದೇನು?’: ಅಳಲು ತೋಡಿಕೊಂಡ ಗೃಹ ರಕ್ಷಕ ದಳದ ಸಿಬ್ಬಂದಿ.ಸಂಪಾದಕೀಯ | RCB ತಂಡಕ್ಕೆ ಸನ್ಮಾನ: ಕಾಲ್ತುಳಿತದ ಸಂಪೂರ್ಣ ಹೊಣೆ ಸರ್ಕಾರ ಹೊರಬೇಕು.
ಗೇಟ್ಗಳನ್ನು ಒಂದೊಂದಾಗಿ ತೆರೆಯಲಾಯಿತು. ಯಾವಾಗ ಅಥವಾ ಯಾವ ಗೇಟ್ ತೆರೆಯಬೇಕು ಎಂಬ ಸ್ಪಷ್ಟ ಸೂಚನೆ ಅಥವಾ ಪ್ರಕಟಣೆಯೂ ಇರಲಿಲ್ಲ ಎಂದ ಅವರು, 'ಒಂದೇ ಗೇಟ್ ಸುತ್ತ ಸಾವಿರಾರು ಮಂದಿ ಜಮಾಯಿಸಿದ್ದರು. ಅದು ತೆರೆದಿರುವುದನ್ನು ನೊಡಿದ ಇನ್ನಷ್ಟು ಮಂದಿಯೂ ಅದರತ್ತಲೇ ನುಗ್ಗಿದರು. ಇದರಿಂದ ಸೃಷ್ಟಿಯಾದ ಇಕ್ಕಟ್ಟು ಕಾಲ್ತುಳಿತಕ್ಕೆ ಕಾರಣವಾಯಿತು' ಎಂದು ವಿವರಿಸಿದ್ದಾರೆ.

ಇದಷ್ಟೇ ಅಲ್ಲ. ಪ್ರವೇಶ ಪ್ರಕ್ರಿಯೆ ಬಗ್ಗೆಯೂ ಸಾಕಷ್ಟು ಗೊಂದಲಗಳಿದ್ದವು. ಕ್ರೀಡಾಂಗಣದಲ್ಲಿ ನಡೆಯುವ ಇತರ ಪಂದ್ಯಗಳ ಹಾಗೆ ಕಾರ್ಯಕ್ರಮದ ಕುರಿತು ನಿರ್ದಿಷ್ಟ ಮಾಹಿತಿ ಇಲ್ಲದ ಹಲವರು, ಒಳಗೆ ಹೋಗಲು ಅವಕಾಶ ಸಿಗಬಹುದೆಂದು ಬಂದಿದ್ದರು. ಕಾರ್ಯಕ್ರಮಗಳು ಆಯೋಜನೆಗೊಂಡಿದ್ದ ವಿಧಾನಸೌಧ ಹಾಗೂ ಕ್ರೀಡಾಂಗಣ ಎರಡೂ ಕಡೆ ಸಾಕಷ್ಟು ಆಂಬ್ಯುಲೆನ್ಸ್ಗಳು ಇರಲಿಲ್ಲ.

ರೋಡ್ ಶೋ ಕುರಿತು ಅಭಿಮಾನಿಗಳಲ್ಲಿ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ವಿಧಾನಸೌಧದ ಬಳಿ ಜಮಾಯಿಸಿದ್ದ ಲಕ್ಷಾಂತರ ಜನರು, ಅಲ್ಲಿ ಸನ್ಮಾನ ಕಾರ್ಯಕ್ರಮದ ಮುಗಿಯುತ್ತಿದ್ದಂತೆ ಕ್ರೀಡಾಂಗಣದತ್ತ ಹೊರಟರು. ಇದು ದುರಂತದ ತೀವ್ರತೆ ಹೆಚ್ಚಿಸಿತು.

ಕ್ರೀಡಾಂಗಣದಲ್ಲಿ ಅದಾಗಲೇ ಕಾಲ್ತುಳಿತ ಸಂಭವಿಸಿದ್ದರೂ, ಆ ಕುರಿತ ಯಾವುದೇ ಮಾಹಿತಿ ವಿಧಾನಸೌಧದ ಬಳಿ ಇದ್ದವರಿಗೆ ತಿಳಿದಿರಲಿಲ್ಲ. ನೆಟ್ವರ್ಕ್ ಸಮಸ್ಯೆ ಇದ್ದ ಕಾರಣ, ಕ್ರೀಡಾಂಗಣದತ್ತ ಹೋಗಿದ್ದ ತಮ್ಮ ಮಕ್ಕಳ ಬಗ್ಗೆ ಪೋಷಕರೂ ಆತಂಕಗೊಳ್ಳುವಂತಾಯಿತು.
.Bengaluru Stampede | ಅನಾಹುತ ತಂದ ಅಭಿಮಾನದ ಹುಚ್ಚು ಉನ್ಮಾದ.Bengaluru Stampede | ಕಾಲ್ತುಳಿತ ದುರಂತ; ಹೃದಯ ಒಡೆದಿದೆ: ವಿರಾಟ್ ಕೊಹ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.