ಬೆಂಗಳೂರು: ದ್ವಿಚಕ್ರ ವಾಹನ ಕಳ್ಳರ ತಂಡಗಳು ನಗರದಲ್ಲಿ ಮತ್ತೆ ಸಕ್ರಿಯವಾಗಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ರಾಜಧಾನಿಗೆ ಬಂದಿರುವ ಕಳ್ಳರು, ಸ್ಥಳೀಯ ಆರೋಪಿಗಳ ನೆರವು ಪಡೆದು ಕ್ಷಣಾರ್ಧದಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗುತ್ತಿದ್ದಾರೆ.

ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನವನ್ನು ನಿಲುಗಡೆ ಮಾಡಿ, ಅಂಗಡಿಗೆ ತೆರಳಿ ವಾಪಸ್ ಬರುವಷ್ಟರಲ್ಲಿಯೇ ವಾಹನಗಳು ಕಳ್ಳತನ ಆಗುತ್ತಿವೆ. ಕಳ್ಳತನವಾದ ವಾಹನಗಳ ಪತ್ತೆ ಕಾರ್ಯವು ನಗರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ದ್ವಿಚಕ್ರ ವಾಹನ ಕಳ್ಳರನ್ನು ಪತ್ತೆಹಚ್ಚುವ ಕಾರ್ಯವನ್ನು ಚುರುಕು ಮಾಡುವಂತೆ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಎಲ್ಲ ಠಾಣೆಗಳ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಪೂರ್ವ, ಪಶ್ಚಿಮ, ಉತ್ತರ ಹಾಗೂ ಆಗ್ನೇಯ ವಿಭಾಗದಲ್ಲಿ ಹೆಚ್ಚು ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಕಳೆದ ಎರಡೂವರೆ ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ ಕಳ್ಳತನ ಆಗಿರುವ ದ್ವಿಚಕ್ರ ವಾಹನಗಳ ಪೈಕಿ, ಪತ್ತೆ ಆಗುತ್ತಿರುವ ದ್ವಿಚಕ್ರ ವಾಹನಗಳ ಸಂಖ್ಯೆ ತೀರಾ ಕಡಿಮೆಯಿದೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 13,394 ದ್ವಿಚಕ್ರ ವಾಹನಗಳು ಕಳ್ಳತನವಾಗಿವೆ. ಆ ಪೈಕಿ ನಾಲ್ಕೂವರೆ ಸಾವಿರ ವಾಹನಗಳನ್ನಷ್ಟೇ ಪತ್ತೆಹಚ್ಚಿ ಪೊಲೀಸರು ಜಪ್ತಿ ಮಾಡಿದ್ದಾರೆ. ಉಳಿದ ದ್ವಿಚಕ್ರ ವಾಹನಗಳ ಸುಳಿವೇ ಸಿಕ್ಕಿಲ್ಲ.

ಕದ್ದ ದಿನವೇ ಹೊರ ರಾಜ್ಯಕ್ಕೆ ಸಾಗಣೆ: ‘ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬಸ್ನಲ್ಲಿ ನಗರಕ್ಕೆ ಬರುವ ಕಳ್ಳರು, ನಕಲಿ ದಾಖಲೆಗಳನ್ನು ನೀಡಿ ಬಾಡಿಗೆ ಕೊಠಡಿ ಪಡೆದುಕೊಳ್ಳುತ್ತಾರೆ. ವಿವಿಧ ಬಡಾವಣೆಗಳಲ್ಲಿ ಓಡಾಟ ನಡೆಸಿ ರಾತ್ರಿ ವೇಳೆ ಮನೆಯಿಂದ ಹೊರ ಭಾಗದಲ್ಲಿ ನಿಲುಗಡೆ ಮಾಡುವ ದ್ವಿಚಕ್ರ ವಾಹನಗಳನ್ನು ಗುರುತಿಸುತ್ತಾರೆ. ಕೆಲವು ದಿನಗಳು ಕಳೆದ ಬಳಿಕ ಬಾಡಿಗೆ ಕೊಠಡಿ ಖಾಲಿ ಮಾಡುತ್ತಾರೆ. ಆಗ ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿಕೊಂಡು ತಮ್ಮ ರಾಜ್ಯಕ್ಕೆ ತೆರಳುತ್ತಿದ್ದಾರೆ. ಅಲ್ಲಿ ಪರಿಚಯಸ್ಥರಿಗೆ ಕಡಿಮೆ ದರಕ್ಕೆ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವು ಆರೋಪಿಗಳು, ವಾಹನಗಳ ಬಿಡಿ ಭಾಗವನ್ನು ಕಳಚಿ ಮಾರಾಟ ಮಾಡುತ್ತಾರೆ. ಇದರಿಂದಾಗಿ ಕಳ್ಳತನವಾದ ವಾಹನಗಳ ಪತ್ತೆಹಚ್ಚುವುದು ಕಷ್ಟವಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.

ಆಂಧ್ರಪ್ರದೇಶದಿಂದ ಬಸ್ನಲ್ಲಿ ನಗರಕ್ಕೆ ಬಂದು, ನಕಲಿ ಕೀಗಳನ್ನು ಬಳಸಿ 32 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ಆರೋಪಿಯನ್ನು ಕಳೆದ ವಾರ ಎಚ್ಎಎಲ್ ಠಾಣೆಯ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದರು. ಈತನ ವಿಚಾರಣೆ ನಡೆಸಿದಾಗ, ನಗರದ ಕಳ್ಳರು ಆತನಿಗೆ ನೆರವು ನೀಡಿದ್ದು ಗೊತ್ತಾಗಿತ್ತು.

ದ್ವಿಚಕ್ರ ವಾಹನಗಳ ಕಳ್ಳತನದಲ್ಲಿ ಶತಕ ಬಾರಿಸಿದ್ದ ಅಂತರ ರಾಜ್ಯ ಕಳ್ಳನನ್ನು ಕೆಲವು ದಿನಗಳ ಹಿಂದೆ ಕೆ.ಆರ್. ಪುರ ಠಾಣೆಯ ಪೊಲೀಸರು ಬಂಧಿಸಿದ್ದರು. ಈತ ದುಬಾರಿ ಬೆಲೆಯ ಬೈಕ್ಗಳನ್ನು ಮಾತ್ರವೇ ಕಳ್ಳತನ ಮಾಡಿಕೊಂಡು ಆಂಧ್ರಪದೇಶಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದ.

ಕದ್ದ ದ್ವಿಚಕ್ರ ವಾಹನಗಳನ್ನು ನಂಬರ್ ಪ್ಲೇಟ್, ಎಂಜಿನ್ ಸಂಖ್ಯೆಯನ್ನು ಬದಲಿಸಿ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಆರೋಪಿಗಳ ಪತ್ತೆ ಸವಾಲಾಗಿದೆ ಎಂದು ಪೊಲೀಸರು ಹೇಳಿದರು.

ಕಳ್ಳತನವಾದ ದ್ವಿಚಕ್ರ ವಾಹನಗಳ ಪತ್ತೆ ಕಾರ್ಯವನ್ನು ಚುರುಕುಗೊಳಿಸುವಂತೆ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಠಾಣೆಯ ಸಿಬ್ಬಂದಿಗೆ ಸೂಚಿಸಲಾಗಿದೆ
ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್

ಪೊಲೀಸರ ಸಲಹೆಗಳು ಏನು?

ಪಾರ್ಕಿಂಗ್ ಸ್ಥಳದಲ್ಲೇ ದ್ವಿಚಕ್ರ ವಾಹನ ನಿಲುಗಡೆ ಮಾಡಬೇಕು

ವಾಹನದಲ್ಲಿ ಕೀ ಬಿಟ್ಟು ಹೋಗಬಾರದು. ಗಟ್ಟಿಯಾದ ಹ್ಯಾಂಡಲ್ ಲಾಕ್ ಬಳಸಬೇಕು

ಬೆಳಕು ಹಾಗೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರುವ ಸ್ಥಳಗಳಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಬೇಕು

ಕಳ್ಳರು ನಕಲಿ ಕೀ ಬಳಸಿ ವಾಹನ ಕಳವು ಮಾಡಲು ಯತ್ನಿಸಿದರೆ ಎಚ್ಚರಿಕೆ ನೀಡುವಂತೆ ಸೈರನ್ ಅಳವಡಿಸಿಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.