ಗುರುವಾರ , ಮೇ 13, 2021
22 °C

ಮುಂದುವರಿದ ಮುಷ್ಕರ: 498 ಸಿಬ್ಬಂದಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾರಿಗೆ ಮುಷ್ಕರ 8ನೇ ದಿನವಾದ ಬುಧವಾರವೂ ಮುಂದುವರಿದ ಕಾರಣ, ಯುಗಾದಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ಜನ ಮನೆ ತಲುಪಲು ಪರದಾಡಿದರು.‌

ಹಬ್ಬಕ್ಕೆ ಊರಿಗೆ ಹೋಗಲು ಪರದಾಡಿದ್ದ ಜನರು ವಾಪಸ್ ಬಂದಾಗಲೂ ಮನೆ ಸೇರಲು ಬಿಎಂಟಿಸಿ ಬಸ್‌ಗಳಿಗಾಗಿ ಕಾದರು. ಮುಷ್ಕರದ ನಡುವೆಯೂ ಅಲ್ಲಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸಿದವು.

ಊರಿನಿಂದ ಬಂದ ಕೆಲವರು ಆಟೋರಿಕ್ಷಾ ಮ‌ತ್ತು ಟ್ಯಾಕ್ಸಿಗಳಲ್ಲಿ ಮನೆ ಸೇರಿದರೆ, ಹಲವರು ಬೈಕ್‌ಗಳಿಗೆ ಕೈ ಒಡ್ಡಿ ಮನೆ ಸೇರಲು ಪ್ರಯತ್ನಿಸಿದರು. ಇನ್ನೂ ಹಲವರು ನಡೆದುಕೊಂಡೇ ಮನೆ ಸೇರಿದರು.

498 ಸಿಬ್ಬಂದಿ ಅಮಾನತು: ಈ ನಡುವೆ, ಸೋಮವಾರ 274 ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದ ಬಿಎಂಟಿಸಿ, ಬುಧವಾರ 224 ನೌಕರರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸರ್ಕಾರ ಮುಷ್ಕರ ನಿಷೇಧಿಸಿದ್ದು, ಕಾನೂನುಬಾಹಿರವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಏ.15ರೊಳಗೆ ಲಿಖಿತ ಸಮಜಾಯಿಷಿ ನೀಡದಿದ್ದರೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು