ಬೆಂಗಳೂರು: ರೈಲ್ವೆ ಕಂಟೋನ್ಮೆಂಟ್ ಕಾಲೊನಿಯಲ್ಲಿ 371 ಮರಗಳಿರುವ 8.61 ಎಕರೆ ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಿ ಮೂರು ತಿಂಗಳ ಹಿಂದೆ ಹೊರಡಿಸಿದ್ದ ಆದೇಶವನ್ನು ಯಾವುದೇ ಕಾರಣ ನೀಡದೆ ಈ ತಿಂಗಳ 6ರಂದು ಅರಣ್ಯ ಇಲಾಖೆಯು ಹಿಂಪಡೆದಿದೆ.

ವಸಂತನಗರದ ದಂಡು ಪ್ರದೇಶದ ಬಳಿಯ ರೈಲ್ವೆ ಕಾಲೊನಿಯಲ್ಲಿ 371 ಮರಗಳಿರುವ ಈ ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು 2025ರ ಸೆಪ್ಟೆಂಬರ್ 10ರಂದು ಘೋಷಿಸಿಲಾಗಿತ್ತು. ಆದರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಏಕಾಏಕಿ ಈ ಆದೇಶವನ್ನು ವಾಪಸ್ ಪಡೆದಿದ್ದು, ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಈ ಜಾಗದಲ್ಲಿನ ಮರಗಳನ್ನು ತೆರವುಗೊಳಿಸಿ ವಾಣಿಜ್ಯ ಕೇಂದ್ರ ಅಭಿವೃದ್ಧಿಪಡಿಸುವುದಕ್ಕೆ ಪರಿಸರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ, ಹೋರಾಟ ನಡೆಸಿದ್ದರು. ಆಗ, ಇದಕ್ಕೆ ಸ್ಪಂದಿಸಿದ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಮಂಡಳಿಯ ವಿಶೇಷ ಸಭೆ ನಡೆಸಿ, ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ಪ್ರದೇಶವನ್ನು ಹಸಿರು ವಲಯವನ್ನಾಗಿ ಪರಿಗಣಿಸಲಾಗಿತ್ತು.

ಜೀವ ವೈವಿದ್ಯ ಕಾಯ್ದೆ–2002 ನಿಬಂಧನೆಗಳ ಅಡಿಯಲ್ಲಿ ಈ ಸ್ಥಳವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ (ಬಿಎಚ್ಎಸ್) ಎಂದು ಘೋಷಿಸಿ ಅಧಿಸೂಚನೆ ಹೊರಡಿಸಲಾಗಿತ್ತು.

‘ಈ ಪ್ರದೇಶವು ಸಸ್ಯ ಸಂಕುಲ, ಪಕ್ಷಿ ಸಂಕುಲ ಮತ್ತು ಕೀಟ ಸಂಕುಲದ ತಾಣವಷ್ಟೇ ಅಲ್ಲದೆ ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣವಾಗಿದೆ. 50-60 ವರ್ಷಗಳಿಂದ ಬೆಳೆದ ಬೃಹತ್ ಮರಗಳಿರುವ ಈ ಸುಂದರ ಪ್ರದೇಶವನ್ನು ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ ಖಾಸಗಿ ಸಂಸ್ಥೆಯೊಂದಕ್ಕೆ 60 ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿರುವ 368 ಮರಗಳನ್ನು ಕಡಿಯಲು ಅನುಮತಿ ಕೋರಿತ್ತು. ಇದಕ್ಕೆ ಪರಿಸರ ಪ್ರೇಮಿಗಳು, ವೃಕ್ಷ ಪ್ರೇಮಿಗಳು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು.

ಯಾವುದೇ ವಿವರಣೆ ಇಲ್ಲ: ‘ಮರಗಳನ್ನು ಉಳಿಸಿಕೊಳ್ಳಲು ಆ ಪ್ರದೇಶವನ್ನು ಪಾರಂಪರಿಕ ತಾಣವನ್ನಾಗಿಸಲಾಗಿತ್ತು. ಇದಕ್ಕಾಗಿ ಸಾಕಷ್ಟು ಮಂದಿ ಹೋರಾಟ ನಡೆಸಿದ್ದರು. ಮರಗಳ ರಕ್ಷಣೆಯಾಯಿತು ಎಂಬ ಸಂತಸ ಇನ್ನೂ ಮಾಸದ ಸಮಯದಲ್ಲೇ ಯಾವುದೇ ವಿವರಣೆ ಇಲ್ಲದೆ ಅಧಿಸೂಚನೆ ವಾಪಸ್ ಪಡೆದಿರುವುದು ಸರಿಯಲ್ಲ. ಹೋರಾಟ ಮುಂದುವರಿಸುತ್ತೇವೆ’ ಎಂದು ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್ ಹೇಳಿದರು.

ಲಾಬಿಗೆ ಮಣಿದ ಅರಣ್ಯ ಸಚಿವರು: ರಾಮಸ್ವಾಮಿ

‘ಕಂಟೋನ್ಮೆಂಟ್ನಲ್ಲಿ ನೂರಾರು ವರ್ಷಗಳಷ್ಟು ಹಳೆಯ 368 ಮರ ಕಡಿಯದಂತೆ ಪರಿಸರಕ್ಕಾಗಿ ನಾವು ಸಂಘಟನೆ ಸೇರಿದಂತೆ ಹಲವು ಪರಿಸರ ಕಾರ್ಯಕರ್ತರು 2025ರ ಏಪ್ರಿಲ್ನಿಂದ ಮಾಡಿದ ಹೋರಾಟಕ್ಕೆ ಸೆಪ್ಟೆಂಬರ್ನಲ್ಲಿ ಫಲ ಸಿಕ್ಕಿತ್ತು. ಆದರೆ ಅರಣ್ಯ ಸಚಿವರು ಮರಗಳನ್ನು ರಕ್ಷಿಸುವ ತಮ್ಮ ಭರವಸೆಯ ಮಾತಿನಿಂದ ಹಿಂದೆ ಸರಿದು ರಿಯಲ್ ಎಸ್ಟೇಟ್ ಲಾಬಿಗೆ ಮಣಿದ್ದಾರೆ’ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಆರೋಪಿಸಿದರು. ‘ಆಡಳಿತ ನಡೆಸುವವರು ದುಡ್ಡಿನ ದುರಾಸೆಯಿಂದ 368 ಮರಗಳನ್ನು ಕೊಲೆ ಮಾಡಲು ಹೊರಟಿದ್ದಾರೆ. ತಾಪಮಾನ ಹೆಚ್ಚಾಗಿ ಭೂಮಿ ಬಿಸಿಯಾಗಿದ್ದು ಬರ ನೆರೆ ಭೂಕಂಪಗಳು ಹೆಚ್ಚಾಗುತ್ತಿವೆ. ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಪರಿಸರವನ್ನು ಉಳಿಸಿಕೊಂಡು ಸಂರಕ್ಷಿಸಿದರೆ ಮುಂದಿನ ಪೀಳಿಗೆಗೆ ಹಸಿರಿನ ಸಂಪತ್ತು ನೀಡಬಹುದು. ಆದರೆ ಈ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲ’ ಎಂದು ದೂರಿದರು. ‘ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ’ಯವರು ಕಂಟೋನ್ಮೆಂಟ್ ರೈಲ್ವೆ ಕಾಲೊನಿಯಲ್ಲಿ ಸುಮಾರು ಐದು ಎಕರೆ ಜಾಗವನ್ನು ಬಾಗ್ಮನೆ ಐಟಿ ಕಂಪನಿಯವರಿಗೆ ಗುತ್ತಿಗೆ ಕೊಡುತ್ತಿದ್ದಾರೆ. ಇದನ್ನು ನಾವೆಲ್ಲ ಪ್ರತಿಭಟಿಸಿದಾಗ ನಮ್ಮ ಕಣ್ಣೊರೆಸಲು ಆ ಜಾಗವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಿದ್ದರು ಎನಿಸುತ್ತದೆ. ಈಗ ಅವರ ನಿಜ ಬಣ್ಣ ಬಯಲಾಗಿದೆ. ಕಂಟೊನ್ಮೆಂಟ್ನ 371 ಮರಗಳನ್ನು ಉಳಿಸಿ ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂಬ ಆದೇಶವನ್ನು ಮರು ಜಾರಿಗೊಳಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.