ಬೆಂಗಳೂರು: ಮಕ್ಕಳ ಆಶ್ಲೀಲ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಆರೋಪದಡಿ ತೇಜು ಯಾದವ್ ಎಂಬಾತನ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಸ್ಥಳೀಯ ನಿವಾಸಿ ಎನ್ನಲಾಗಿರುವ ತೇಜು ಫೇಸ್‌ಬುಕ್ ಹಾಗೂ ಇತರೆ ಜಾಲತಾಣಗಳಲ್ಲಿರುವ ತನ್ನ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದಾನೆ. ಸಿಐಡಿ ಸೈಬರ್ ವಿಭಾಗದ ಎಸ್ಪಿ ನೀಡಿರುವ ದೂರು ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಹರಿಬಿಟ್ಟಿರುವ ವಿಡಿಯೊದಲ್ಲಿ ಮಕ್ಕಳನ್ನು ಅಶ್ಲೀಲವಾಗಿ ತೋರಿಸಲಾಗಿದೆ. ಈ ವಿಡಿಯೊ ದೇಶ ಹಾಗೂ ವಿದೇಶಗಳಲ್ಲಿ ಹರಿದಾಡಿದೆ. ಇದನ್ನು ಗಮನಿಸಿದ್ದ ಇಂಟರ್‌ಪೋಲ್ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದರು. ಬೆಂಗಳೂರಿನಿಂದಲೇ ವಿಡಿಯೊ ಅಪ್‌ಲೋಡ್ ಆಗಿರುವ ಮಾಹಿತಿ ತನಿಖೆಯಿಂದ ಗೊತ್ತಾಗಿತ್ತು. ಹೀಗಾಗಿಯೇ ಅಧಿಕಾರಿಗಳು, ರಾಜ್ಯದ ಸಿಐಡಿ ಸೈಬರ್ ವಿಭಾಗಕ್ಕೆ ವರದಿ ಕಳುಹಿಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸುವಂತೆ ತಿಳಿಸಿದ್ದರು.’

‘ವಿಡಿಯೊ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.