ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹವಾಮಾನ ಕ್ರಿಯಾ ಕೋಶವು ‘ಮಕ್ಕಳ ಹವಾಮಾನ ಕ್ರಿಯಾ ಸಭೆಯನ್ನು ಪುರಭವನದಲ್ಲಿ ನ.7ರಂದು ಆಯೋಜಿಸಿದೆ.

ನಗರ ಮಟ್ಟದಲ್ಲಿ ಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಹವಾಮಾನ ಕ್ರಿಯೆ ಕುರಿತು ಚರ್ಚಿಸಲು, ವಿನೂತನ ಆಲೋಚನೆಗಳ ಮಂಡನೆ ಮತ್ತು ಸ್ಥಳೀಯ ನಾಯಕತ್ವವನ್ನು ವಹಿಸಲು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ (ಎಫ್ಇಸಿಸಿ) ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದರು.

‘ವಿದ್ಯಾರ್ಥಿಗಳಲ್ಲಿ ಹವಾಮಾನ ಕುರಿತ ಜ್ಞಾನ ಮತ್ತು ನಾಯಕತ್ವವನ್ನು ಬೆಳೆಸುವ ಉದ್ದೇಶದಿಂದ, ನೀರು, ಕಸ, ವಿದ್ಯುತ್, ಹಸಿರೀಕರಣ, ಸಂಚಾರ ಮತ್ತು ಸ್ಥಿರತೆ ಇತ್ಯಾದಿ ಕ್ಷೇತ್ರಗಳಲ್ಲಿ ನೈಜ ಪರಿಹಾರಗಳನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಮಕ್ಕಳನ್ನು ಹವಾಮಾನ ಕ್ರಿಯೆಯ ಫಲಾನುಭವಿಗಳಾಗಿ ಕಾಣದೇ, ಸಮಾನ ಹಕ್ಕಿನ ಪಾಲುದಾರರು ಹಾಗೂ ಬದಲಾವಣೆಯ ಮುಂಚೂಣಿಗಾರರಾಗಿ ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.

‘ವಿದ್ಯಾರ್ಥಿಗಳ ಹವಾಮಾನ ಅರ್ಥವೈಶಿಷ್ಟ್ಯ, ವಿಮರ್ಶಾತ್ಮಕ ಚಿಂತನೆ, ಸ್ಥಳೀಯ ಸಮಸ್ಯೆಗಳ ತಿಳಿವು ಮತ್ತು ಸ್ಪಷ್ಟ ಸಂವಾದ ಸಾಮರ್ಥ್ಯಗಳನ್ನು ಆಧರಿಸಿ ಮೌಲ್ಯಮಾಪನ ಮಾಡಿ, ಅಂತಿಮವಾಗಿ, ಐದು ನಗರ ಪಾಲಿಕೆಗಳಿಂದ ತಲಾ ನಾಲ್ಕು ಶಾಲಾ–ಕಾಲೇಜುಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.