ಬೆಂಗಳೂರು: ‘ಮೊಬೈಲ್ ಗೀಳಿನಲ್ಲಿ ಮುಳುಗಿರುವ ಮಕ್ಕಳನ್ನು ಸದಭಿರುಚಿಯೆಡೆಗೆ ತರುವಲ್ಲಿ ಮಕ್ಕಳ ವಚನ ಮೇಳ ಯಶಸ್ವಿಯಾಗಿದೆ’ ಎಂದು ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದರು.

ವಚನಜ್ಯೋತಿ ಬಳಗ ಆಯೋಜಿಸಿದ್ದ ಮಕ್ಕಳ ವಚನ ಮೇಳದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಪ್ರಕೃತಿರಮಣೀಯವಾದ ಕಲಾಗ್ರಾಮದಲ್ಲಿ ಏಳು ದಿನ ಸಂಸ್ಕೃತಿಯ ಪ್ರಸರಣ ಬಹು ಅಚ್ಚುಕಟ್ಟಾಗಿ ನಡೆದಿದೆ. ಸಾವಿರಾರು ಮಕ್ಕಳು ವಚನಗಳನ್ನು ಹಾಡುವುದಷ್ಟೇ ಅಲ್ಲ, ನೃತ್ಯ ಮಾಡಿಯೂ ಮೆರೆದಿರುವುದು ಗುಣಾತ್ಮಕ ಹೆಜ್ಜೆ’ ಎಂದು ಬಣ್ಣಿಸಿದರು.

‘ವಚನ ಮೇಳಕ್ಕೆ ತಯಾರಾಗಲು ಮಕ್ಕಳು ಮೂರು ತಿಂಗಳಿಂದ ಸಜ್ಜಾಗಿ ಮೊಬೈಲ್, ಟಿ.ವಿಯಿಂದ ದೂರವಾಗಿರುವುದು ಒಳ್ಳೆಯ ಬೆಳವಣಿಗೆ. ವಚನಗಳ ಕುರಿತ ನಿರಂತರ ಕಾರ್ಯಕ್ರಮಗಳ ಮೂಲಕ ವಚನಜ್ಯೋತಿ ಬಳಗ ಸಾರ್ಥಕ ಕಾರ್ಯ ಮಾಡುತ್ತಿದೆ’ ಎಂದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ‘ಮಕ್ಕಳ ವಚನ ಮೇಳ ಅತ್ಯುತ್ತಮ ಗಾಯಕರು, ನೃತ್ಯಗಾರರು, ಅದ್ಬುತ ಮಾತುಗಾರರನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಬಹುಮಾನ ವಿಜೇತರಷ್ಟೇ ಅಲ್ಲದೆ ಮಕ್ಕಳ ವಚನ ಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಅವರದೇ ಭಾವಚಿತ್ರವನ್ನು ಒಳಗೊಂಡ ಪ್ರಶಂಸಾ ಪತ್ರ ನೀಡಲಾಗುತ್ತದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಜನವರಿ 10ರಂದು ಬಹುಮಾನ ನೀಡುವ ಸಮಾರಂಭ ನಡೆಯಲಿದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಬಳಗದ ಪದಾಧಿಕಾರಿಗಳಾದ ರುದ್ರಪ್ಪ ದೇಸಾಯಿ, ಪ್ರಭು ಇಸುವನಹಳ್ಳಿ, ರಾಜಾ ಗುರುಪ್ರಸಾದ್, ಮಧು, ಕಾತ್ಯಾಯಿನಿ, ರತ್ನಾ, ಗಾಯಕಿಯರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ರಮಾಮಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.