ಶುಕ್ರವಾರ, ಜನವರಿ 24, 2020
27 °C

ಹಾಸ್ಯೋತ್ಸವಗಳೆಂದರೆ ಮಾನಸಿಕ ಹಿಂಸೆ: ಎಚ್.ಎಸ್. ವೆಂಕಟೇಶ ಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಅಶ್ಲೀಲತೆ, ದ್ವಂದ್ವಾರ್ಥವೇ ಪ್ರಧಾನವಾಗಿರುವ ಈಗಿನ ಹಾಸ್ಯೋತ್ಸವಗಳೆಂದರೆ ಮಾನಸಿಕ ಹಿಂಸೆ ಎನಿಸುತ್ತದೆ. ಅಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೂ ಬೇಸರವಾಗುತ್ತದೆ’ ಎಂದು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ ಹೇಳಿದರು. 

ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ಟಿ.ಸುನಂದಮ್ಮ ಸಾಹಿತ್ಯ ಸಂಪುಟ-2’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಬೀಚಿಯವರದು ಹರಿತವಾದ ಹಾಸ್ಯವಾಗಿತ್ತು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರದು ದೈವಿಕ ಹಾಸ್ಯವಾಗಿತ್ತು. ಅದರೆ, ಸುನಂದಮ್ಮ ಅವರು ರಚಿಸಿದ ಹಾಸ್ಯ ಸಾಹಿತ್ಯ ಘನತೆಯುಳ್ಳದ್ದಾಗಿತ್ತು' ಎಂದರು. 

‘ಹಿಂದಿನ ಕಾಲದಲ್ಲಿ ಯಾವ ಮಹಿಳೆಯೂ ಹಾಸ್ಯವನ್ನು ತಮ್ಮ ಕೃತಿಗಳಲ್ಲಿ ಪ್ರಧಾನವಾಗಿ ಬಳಸಿಕೊಂಡಿರಲಿಲ್ಲ. ಸುನಂದಮ್ಮ ಅವರು ಈ ಪ್ರಕಾರದಲ್ಲಿ ಬರೆದದ್ದಷ್ಟೇ ಅಲ್ಲದೆ ಯಶಸ್ವಿಯೂ ಆದರು. ಅವರು ವಾಸ್ತವತೆಯ ಪ್ರಜ್ಞೆ ಬಿಟ್ಟುಕೊಡಲಿಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು