ಸೋಮವಾರ, ಜೂನ್ 1, 2020
27 °C

ಕೈಗೆಟುಕುವ ಬೆಲೆಗೆ ಆಲೋಹಾಲ್-ರಹಿತ ಶುದ್ಧಿ ಸ್ಯಾನಿಟೈಜರ್ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಗೆಟುಕುವ ಬೆಲೆಗೆ ಆಲೋಹಾಲ್-ರಹಿತ ಶುದ್ಧಿ ಸ್ಯಾನಿಟೈಜರ್ ಮಾರುಕಟ್ಟೆಗೆ 

ಬೆಂಗಳೂರು: ಕೊರೊನಾ ವೈರಾಣು-19 ( ಕೋವಿಡ್-19 ) ಒಳಗೊಂಡಂತೆ ಯಾವುದೇ ಸೋಂಕು ತಗುಲದಂತೆ   ಅನುಕೂಲವಾಗುವ ಆಲೋಹಾಲ್-ರಹಿತ ಸ್ಯಾನಿಟೈಸರ್ ಇದೀಗ ಮಾರುಕಟ್ಟೆಗೆ ಬಂದಿದೆ. 

ಶುಚಿತ್ವ ಕಾಪಾಡಿಕೊಳ್ಳಲು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‍ಗಳು ಮಾತ್ರವಲ್ಲ, ಆಲ್ಕೋಹಾಲ್ ಅಂಶ ರಹಿತವಾಗಿರುವ ಜೈವಿಕ ಸ್ಯಾನಿಟೈಜರ್ ಕೂಡಾ ಮಾರುಕಟ್ಟೆ ಪ್ರವೇಶಿಸಿದೆ. ಬೆಂಗಳೂರಿನ ಮಲ್ಟಿಪ್ಲೇಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ತಯಾರಿಸಿರುವ ಮಲ್ಟಿಪ್ಲೆಕ್ಸ್ ಶುದ್ಧಿ ಹ್ಯಾಂಡ್ ಸ್ಯಾನಿಟೈಜರ್ ಹೆಸರಿನ ಈ ಜೈವಿಕ ಸ್ಯಾನಿಟೈಜರ್ ಬಳಸಿದಾಗ, ಅಲ್ಕೋಹಾಲ್ ಅಂಶವನ್ನು ಒಳಗೊಂಡ ಇತರೆ ಎಲ್ಲಾ ಪಾರಂಪರಿಕ ಸ್ಯಾನಿಟೈಜರ್‍ಗಳಿಗಿಂತಲೂ ಸುದೀರ್ಘ ಕಾಲ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಅಲ್ಲದೆ, ಆಲೋಹಾಲ್ ಅಂಶವನ್ನು ಒಳಗೊಂಡ ಸ್ಯಾನಿಟೈಸರ್‍ಗಳಿಗಿಂತಲೂ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಮಲ್ಟಿಪ್ಲೆಕ್ಸ್ ಶುದ್ಧಿ ಹ್ಯಾಂಡ್ ಸ್ಯಾನಿಟೈಜರ್‍ನ 100 ಎಂ ಎಲ್ ಬಾಟಲಿಯ ಬೆಲೆ ಕೇವಲ ಐವತ್ತು ರೂಪಾಯಿಗಳು ಮಾತ್ರ ಎಂಬುದು ಗಮನಾರ್ಹ. 

ಕೊರೊನಾ ವೈರಾಣು ವ್ಯಾಪಿಸುತ್ತಿರುವ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಈ ತುರ್ತು ಪರಿಸ್ಥಿತಿಯಲ್ಲಿ ರ್ಸಾಜನಿಕರಿಗೆ, ಅದರಲ್ಲೂ, ಬಡಜನರು ಹಾಗೂ ಮಧ್ಯಮ ವರ್ಗದವರಿಗೆ, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಜೈವಿಕ ಸ್ಯಾನಿಟೈಜರ್ ( ಬಯೋ ಆಗ್ರ್ಯಾನಿಕ್ ) ಪೂರೈಸಬೇಕೆಂಬ ಸದಾಶಯದೊಂದಿಗೆ ಮಲ್ಟಿಪ್ಲೇಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ತನ್ನ ಈ ಹೊಸ ಆವಿಷ್ಕಾರದಿಂದ ಜೈವಿಕ ತಂತ್ರಜ್ಞಾನದ ಸಾಧ್ಯತೆಗಳನ್ನು ಆಗುಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು