ಗುರುವಾರ , ಫೆಬ್ರವರಿ 20, 2020
27 °C

ಬಾಲಕನ ಕೊಲೆ; ಸ್ನೇಹಿತ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೈಯಪ್ಪನಹಳ್ಳಿ ರೈಲ್ವೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರವಿತೇಜ್ (17) ಕೊಲೆ ಸಂಬಂಧ, ಆತನ ಸ್ನೇಹಿತ ರಾಕೇಶ್ ಅಲಿಯಾಸ್ ಡ್ಯಾನಿಯನ್ನು (19) ಬಂಧಿಸಲಾಗಿದೆ.

‘ಹಳೇ ಚಂದಾಪುರದ ರಾಕೇಶ್, ಬನಹಳ್ಳಿ ನಿವಾಸಿ ರವಿತೇಜ್‌ನನ್ನು ಮರಸೂರು ರೈಲ್ವೆ ಬ್ರಿಡ್ಜ್‌ ಸಮೀಪ ಕೊಲೆ ಮಾಡಿದ್ದ. ಮೃತದೇಹವನ್ನು ಹಳಿ ಮೇಲೆ ಹಾಕಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

‘9ನೇ ತರಗತಿಗೇ ಶಾಲೆ ಬಿಟ್ಟು ರವಿತೇಜ್ ಮನೆಯಲ್ಲಿದ್ದ. ವಯಸ್ಸಿನಲ್ಲಿ ದೊಡ್ಡವನಾದ ರಾಕೇಶ್‌ ಜೊತೆ ಸ್ನೇಹ ಬೆಳೆಸಿದ್ದ. ಇಬ್ಬರೂ ಸೇರಿ ಮೊಬೈಲ್ ಕಳವು ಮಾಡಿದ್ದರು. ಅದನ್ನು ಮಾರಿ ಬಂದ ಹಣ ಹಂಚಿಕೊಳ್ಳುವ ಸಂಬಂಧ ಇಬ್ಬರ ನಡುವೆ ಗಲಾಟೆ ಆಗಿತ್ತು.’

‘ಜ.30ರಂದು ಸಂಜೆ ಮಾತನಾಡುವ ನೆಪದಲ್ಲಿ ಕರೆ ದೊಯ್ದು ಕೃತ್ಯ ಎಸಗಿದ್ದ.  ಜ.31 ರಂದು ಬೆಳಿಗ್ಗೆ ಮೃತದೇಹ ಸಿಕ್ಕಿತ್ತು. ರವಿತೇಜ್‌ ತಂದೆ ಮಂಜುನಾಥ್ ದೂರು ನೀಡಿದ್ದರು’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು