ಅಕ್ವೇರಿಯಂಗಳಲ್ಲಿರುವ ಆಲಂಕಾರಿಕ ಮೀನುಗಳನ್ನು ಪುಟಾಣಿಗಳು ಕುತೂಹಲದಿಂದ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ರಂಜು ಪಿ.
ಮತ್ಸ್ಯಾಲಯದ ಹೊರನೋಟ
ಪ್ರಜಾವಾಣಿ ಚಿತ್ರ: ರಂಜು ಪಿ.
ಟನಲ್‌ನಲ್ಲಿರುವ ಮೀನುಗಳನ್ನು ಸಾರ್ವಜನಿಕರು ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ರಂಜು ಪಿ
ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ
1983ರಲ್ಲಿ ಈ ಮತ್ಸ್ಯಾಲಯವನ್ನು 17,500 ಚದರಡಿಯಲ್ಲಿ ನಿರ್ಮಿಸಲಾಗಿದೆ. ಸದ್ಯ ಇದನ್ನು ಪಿಪಿಪಿ ಯೋಜನೆಯ ಅಡಿಯಲ್ಲಿ ಸುಮಾರು ₹14 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ಎರಡು ಅಂತಸ್ತಿನ ಮತ್ಸ್ಯಾಲಯದ ಹಳೆಯ ಕಟ್ಟದ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು ಅಭಿವೃದ್ಧಿ ಮಾಡಲಾಗಿದೆ. ‘ನಮ್ಮ ಬೆಂಗಳೂರು ಅಕ್ವೇರಿಯಂ‘ ಸಂಸ್ಥೆಯು ಈ ಮತ್ಸ್ಯಾಲಯವನ್ನು 30 ವರ್ಷಗಳವರೆಗೆ ನಿರ್ವಹಣೆ ಮಾಡಲಿದೆ.
‘ಮತ್ಸ್ಯಾಲಯಕ್ಕೆ ಜೀವಕಳೆ’
‘ಮತ್ಸ್ಯಾಲಯಕ್ಕೆ ಹೊಸ ರೂಪ ನೀಡಿದ ನಂತರ ನಿತ್ಯ ಸಾವಿರಾರೂ ಜನ ಭೇಟಿ ನೀಡುತ್ತಿದ್ದಾರೆ. ಮತ್ಸ್ಯಾಲಯಕ್ಕೆ ಮತ್ತೆ ಹೊಸ ಜೀವಕಳೆ ಬಂದಿದೆ. ವಿಭಿನ್ನ ಹಾಗೂ ವಿಶೇಷ ತಳಿಯ ಮೀನುಗಳು ಮತ್ಸ್ಯಾಲಯದಲ್ಲಿ ನೋಡಲು ಸಿಗುತ್ತವೆ. ಇದು ಪ್ರವಾಸಿಗರು ಹಾಗೂ ಮಕ್ಕಳನ್ನು ಆಕರ್ಷಿಸುತ್ತಿದೆ. ಅಕ್ವೇರಿಯಂ ಉದ್ದೇಶ ಬರೀ ಆದಾಯ ಗಳಿಕೆ ಮಾತ್ರವಲ್ಲ. ಜೊತೆಗೆ ಮಕ್ಕಳು ಹಾಗೂ ಸಾರ್ವಜನಿಕರಿಗೆ ಆಲಂಕಾರಿಕ ಮೀನುಗಳ ಮಾಹಿತಿ ತಿಳಿಸುವ ಉದ್ದೇಶವೂ ಇದೆ. 110ಕ್ಕೂ ಹೆಚ್ಚಿನ ಆಲಂಕಾರಿಕ ಮೀನುಗಳು ಇಲ್ಲಿವೆ. ಮೀನುಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ತರಬೇತಿಯನ್ನು ನೀಡಲಾಗುತ್ತದೆ’ ಎಂದು ನಮ್ಮ ಬೆಂಗಳೂರು ಅಕ್ವೇರಿಯಂ ಸಂಸ್ಥೆಯ ನಿರ್ದೇಶಕ ಪ್ರಣವ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಮೆಜಾನ್ ನದಿಯಲ್ಲಿ ಕಂಡುಬರುವ ಪಿರಾನ ಮೀನುಗಳು
ಪ್ರಜಾವಾಣಿ ಚಿತ್ರ: ರಂಜು ಪಿ.

ಮತ್ಸ್ಯಾಲಯದಲ್ಲಿನ ಸುರಂಗವು ಸಮುದ್ರದಾಳದ ಅನುಭವ ನೀಡುತ್ತದೆ. ನಾನು, ಇಲ್ಲಿ ಬಗೆ ಬಗೆಯ ಆಲಂಕಾರಿಕ ಮೀನುಗಳನ್ನು ನೋಡಿದೆ. ಜೊತೆಗೆ ಅವುಗಳಿಗೆ ಸಂಬಂಧಿಸಿದ ಮಾಹಿತಿಯೂ ಲಭ್ಯವಾಯಿತು. ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಇಲ್ಲಿಗೆ ಭೇಟಿ ನೀಡಬಹುದು.
– ರಂಜಿತಾ, ಚಾಮರಾಜನಗರ
ಸಮುದ್ರದಲ್ಲಿ ಸ್ಕೂಬಾ ಡ್ರೈವಿಂಗ್ ಮಾಡಲು ಆಗದವರು ಇಲ್ಲಿಗೆ ಭೇಟಿ ನೀಡಿದರೆ, ಅದರ ಅನುಭವ ಪಡೆದುಕೊಳ್ಳಬಹುದು. ಸಮುದ್ರದ ಜೀವಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಇದೊಂದು ಅದ್ಭುತ ತಾಣ.
– ಹರ್ಷಿತಾ, ಬನಶಂಕರಿ
ಇಲ್ಲಿರುವ ಪಿರಾನ ಮೀನುಗಳ, ಜೆಲ್ಲಿ ಫಿಶ್, ವಿವಿಧ ಆಲಂಕಾರಿಕ ಮೀನುಗಳನ್ನು ಒಂದೇ ವೇದಿಕೆಯಲ್ಲಿ ನೋಡಬಹುದು. ಮೀನು ಸಾಕಾಣಿಕೆ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಲು ಇಲ್ಲಿ ತರಬೇತಿ ನೀಡಲಾಗುತ್ತದೆ. ಪ್ರತಿಯೊಬ್ಬರು ಇಲ್ಲಿಗೆ ಒಮ್ಮೆ ಭೇಟಿ ನೀಡಬೇಕು.
– ಸಂಜು, ಐಟಿ ಉದ್ಯೋಗಿ