ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಸರಹಳ್ಳಿ: ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ

Published : 15 ಸೆಪ್ಟೆಂಬರ್ 2024, 14:24 IST
Last Updated : 15 ಸೆಪ್ಟೆಂಬರ್ 2024, 14:24 IST
ಫಾಲೋ ಮಾಡಿ
Comments

ಬೆಂಗಳೂರು: ದಾಸರಹಳ್ಳಿ ವಲಯದ ಸುಬ್ರತೊ ಮುಖರ್ಜಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ವಲಯ ಆಯುಕ್ತ ಗಿರೀಶ್‌ ಪರಿಶೀಲಿಸಿದರು.

ದಾಸರಹಳ್ಳಿ‌ ವಲಯದಲ್ಲಿ ಒಂದು ವಿಧಾನಸಭಾ ಕ್ಷೇತ್ರ ಮಾತ್ರ ಬರಲಿದ್ದು, 11 ವಾರ್ಡ್‌ಗಳಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಂತ ಚಿಕ್ಕದಾದ ವಲಯ ಇದು. ಕೇವಲ 27.82 ಚದರ ಕಿಲೋಮೀಟರ್‌ ವ್ಯಾಪ್ತಿ ಇರುವ ಈ ವಲಯದಲ್ಲಿ 4,432 ರಸ್ತೆಗಳಿವೆ. ಅವುಗಳ ಒಟ್ಟು ಉದ್ದ 607.53 ಕಿ.ಮೀ. ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ' ಎಂದು ಗಿರೀಶ್‌ ತಿಳಿಸಿದರು.

ವಲಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸುಮಾರು 20 ಲೋಡ್ ಡಾಂಬರಿನ ಅವಶ್ಯಕತೆಯಿದೆ. ‘ರಸ್ತೆ ಗುಂಡಿ ಗಮನ’ ತಂತ್ರಾಂಶದಲ್ಲಿ ಬರುವ ದೂರುಗಳು ಹಾಗೂ ಎಂಜಿನಿಯರ್‌ಗಳು ಗುರುತಿಸುವ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ‌ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ಸೇರಿ ಒಟ್ಟು 46.62 ಕಿ.ಮೀ ಉದ್ದದ 19 ಪ್ರಮುಖ ರಸ್ತೆಗಳಿವೆ. ಬಹುತೇಕ ರಸ್ತೆ ಗುಂಡಿಗಳನ್ನು‌ ಮುಚ್ಚಲಾಗಿದೆ. ವಿವಿಧ ಇಲಾಖೆಗಳು ರಸ್ತೆ ಕತ್ತರಿಸಿದ ಭಾಗವನ್ನು ಆಯಾ ಇಲಾಖೆಗಳಿಂದ ಮುಚ್ಚಿಸಿ ದುರಸ್ತಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ವಲಯ ಜಂಟಿ ಆಯುಕ್ತರಾದ ಪಲ್ಲವಿ, ಮುಖ್ಯ ಎಂಜಿನಿಯರ್‌ ರವಿ, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT