ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗವು ಬಿಳಿ ರಾಗಿ ಹಾಗೂ ಸ್ಟೀವಿಯಾ ಬಳಸಿ ಸಕ್ಕರೆ ಹಾಗೂ ಮೈದಾ ಇಲ್ಲದೆಯೇ ಬೇಕರಿ ಉತ್ಪನ್ನಗಳಾದ ಬಿಸ್ಕತ್ತು, ಕುಕೀಸ್ ಮತ್ತು ರಸ್ಕ್ ತಯಾರಿಸಿದೆ.

ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯಕರ ಆಹಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೀಗಾಗಿ, ಮೈದಾ ಮತ್ತು ಸಕ್ಕರೆ ಇಲ್ಲದ ಹೊಸ ಮಾದರಿಯ ಬೇಕರಿ ಉತ್ಪನ್ನಗಳನ್ನು ತಯಾರಿಸಲಾಗಿದೆ. ಸಿಹಿ ಹಾಗೂ ಉಪ್ಪಿನ ಬಿಸ್ಕತ್ತು, ಕುಕೀಸ್ ಮತ್ತು ರಸ್ಕ್ನಲ್ಲಿ ಜಿಕೆವಿಕೆ ಸ್ಟೀವಿಯಾ–1 (ಸಕ್ಕರೆಗೆ ಪರ್ಯಾಯವಾಗಿ ನೈಸರ್ಗಿಕ ಸಿಹಿ ಪದಾರ್ಥ) ಮತ್ತು ಬಿಳಿ ರಾಗಿ–ಕೆಎಂಆರ್–340 ತಳಿಯ ಹಿಟ್ಟನ್ನು ಬಳಸಿಕೊಳ್ಳಲಾಗಿದೆ.

ಸ್ಟೀವಿಯಾ ಗಿಡದ ಎಲೆಗಳಿಂದ ದೊರೆಯುವ ಸಿಹಿ ಪದಾರ್ಥವು ಶೂನ್ಯ ಕ್ಯಾಲೊರಿಯದ್ದಾಗಿದೆ. ಇದು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟದಲ್ಲಿ ವ್ಯತ್ಯಾಸ ಮಾಡುವುದಿಲ್ಲ. ಬಿಳಿ ರಾಗಿಯಲ್ಲಿ ಹೆಚ್ಚು ಕ್ಯಾಲ್ಸಿಯಂ, ಕಬ್ಬಿಣದ ಅಂಶ, ನಾರು (ಡಯಟರಿ ಫೈಬರ್) ಸೇರಿದಂತೆ ಪೌಷ್ಟಿಕಾಂಶಗಳು ಇವೆ. ಮೈದಾ ಹಿಟ್ಟಿಗೆ ಪರ್ಯಾಯವಾಗಿ ಇದನ್ನು ಬಳಸಿಕೊಳ್ಳಬಹುದು.

‘ಸ್ಟೀವಿಯಾ ಮಿಶ್ರಿತ ಬೇಕರಿ ಉತ್ಪನ್ನಗಳನ್ನು ಎರಡು ವಿಧಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸ್ಟೀವಿಯಾ ಹಸಿರು ಎಲೆ ಪುಡಿ, ಸಂಸ್ಕರಿಸಿದ ಬಿಳಿ ಸ್ಟೀವಿಯಾದ ಪುಡಿಯಲ್ಲಿ ಬಿಳಿ ರಾಗಿ ಹಿಟ್ಟನ್ನು ಮಿಶ್ರಣ ಮಾಡಿ ಹಸಿರು, ಬಿಳಿ ಬಿಸ್ಕತ್ತು, ಕುಕೀಸ್ ಮತ್ತು ರಸ್ಕ್ ತಯಾರಿಸಲಾಗಿದೆ. ಇದರಲ್ಲಿ ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಇದ್ದು, ಚಯಾಪಚಯ ಕ್ರಿಯೆಗೆ ಸಹಕಾರಿ ಆಗಿದೆ. ಮಾರುಕಟ್ಟೆಯಲ್ಲಿರುವ ಬೇರೆ ಬಿಸ್ಕತ್ತುಗಳಿಗೆ ಹೋಲಿಸಿದರೆ ಈ ಉತ್ಪನ್ನಗಳಲ್ಲಿ ಅಧಿಕ ಪ್ರೊಟೀನ್, ಕ್ಯಾಲ್ಸಿಯಂ ಇದೆ’ ಎಂದು ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕಿ ಸವಿತಾ ಮಂಗಾನವರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಹಕರಿಗೆ ರುಚಿಕರ ಹಾಗೂ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ನೀಡುವ ಉದ್ದೇಶದಿಂದ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಮೈದಾ ಹಾಗೂ ಸಕ್ಕರೆ ಬಳಸದೇ ಬಿಸ್ಕತ್ತು, ಕುಕೀಸ್ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾವನ್ನು ಖರೀದಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಅವರಿಗೆ ಮೂರು ದಿನಗಳ ತರಬೇತಿಯನ್ನೂ ನೀಡಲಾಗುತ್ತದೆ. ಈ ತಂತ್ರಜ್ಞಾನ ಖರೀದಿಗೆ ದರ ನಿಗದಿಪಡಿಸಬೇಕಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ವಿವರಿಸಿದರು.

‘ಆರೋಗ್ಯಕರ ಪದಾರ್ಥಗಳಿಗೆ ಬೇಡಿಕೆ’

‘ಮೈದಾ ಸಕ್ಕರೆ ಹಾಗೂ ಕೊಬ್ಬು ರಹಿತ ಆರೋಗ್ಯಕರ ಬೇಕರಿ ಪದಾರ್ಥಗಳಿಗೆ ಹೆಚ್ಚು ಬೇಡಿಕೆ ಇದೆ. ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಬರುತ್ತಿದೆ. ಆದರೆ ಸಾರ್ವಜನಿಕರು ರುಚಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಈಗ ಆರೋಗ್ಯ ಮತ್ತು ರುಚಿಯ ನಡುವೆ ಹೋರಾಟ ನಡೆಯುತ್ತಿದೆ. ಆದ್ದರಿಂದ ವಿಶ್ವವಿದ್ಯಾಲಯವು ರುಚಿ ಮತ್ತು ಆರೋಗ್ಯ ದೃಷ್ಟಿಯಿಂದ ಮೈದಾ ಸಕ್ಕರೆ ಹಾಗೂ ಕೊಬ್ಬು ರಹಿತ ಬೇಕರಿ ಉತ್ಪನ್ನಗಳನ್ನು ತಯಾರಿಸುತ್ತಿದೆ’ ಎಂದು ಎಸ್.ವಿ. ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.