ಬೆಂಗಳೂರು ಹೊರವಲಯದ ಹೊಸೂರು ರಸ್ತೆಯ ದೀಪಾವಳಿ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಹಲವು ವಿಶಿಷ್ಟ, ವಿಭಿನ್ನ ಬಗೆಯ ಪಟಾಕಿಗಳು ಮಾರಾಟಕ್ಕಿವೆ. ಕರ್ನಾಟಕ–ತಮಿಳುನಾಡು ಗಡಿಭಾಗದ ಈ ಮಾರುಕಟ್ಟೆಯಲ್ಲಿ ಶಿವಕಾಶಿಯಿಂದ ನೇರವಾಗಿ ತಂದ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ. Pizza Pataki, Golden Duck, Jungle Fantasy, Peacock Torch, Funky Fish, Knife Pataki ಯಂತಹ ಹೊಸ ಮಾದರಿ ಪಟಾಕಿಗಳು ಗ್ರಾಹಕರನ್ನು ಸೆಳೆಯುತ್ತಿವೆ. ಶೇ 70ರಿಂದ ಶೇ 90ರಷ್ಟು ರಿಯಾಯಿತಿ ದರದಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.