ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಜತೆಗೆ ಪ್ರವಾಸಕ್ಕೆ ಬಂದಿರುವವರೂ ಆತಂಕ ಪಡುವ ಅಗತ್ಯವಿಲ್ಲ. ದುಬೈ ಸುರಕ್ಷಿತ ಸ್ಥಳವಾಗಿರುವುದರಿಂದ ಆತಂಕ ಬೇಡ. ನಾವು ನಿಮ್ಮೊಂದಿಗೆ ಇದ್ದೇವೆ
– ಎಂ.ಕೆ.ಅರುಣ್‌ಕುಮಾರ್, ಅಧ್ಯಕ್ಷ ದುಬೈ ಕನ್ನಡಿಗರ ಕೂಟ
ಬೆಂಗಳೂರಲ್ಲೂ ಸಹಾಯವಾಣಿ
ಯುದ್ಧ ಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಬೆಂಗಳೂರು ನಗರ ಜಿಲ್ಲೆಯವರು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ. ಜಿಲ್ಲಾ ಕಛೇರಿಯ ವಿಪತ್ತು ನಿರ್ವಹಣಾ ಕೇಂದ್ರದ ದೂ.ಸಂ: 080-22967200 ಅಥವಾ ವಾಟ್ಸ್ ಆಪ್ ನಂಬರ್ - 810599707/ 9538047199 ಕ್ಕೆ ಸಂದೇಶದ ಮೂಲಕ ಅಥವಾ ಕರೆ ಮಾಡುವಂತೆ ಕೋರಿದ್ದಾರೆ.