ಬೆಂಗಳೂರು: ಮುಸ್ಲಿಂ ಸಮುದಾಯದವರು ನಗರದಲ್ಲಿ ಶುಕ್ರವಾರ ಈದ್ ಮಿಲಾದ್ ಅನ್ನು ಸಡಗರದಿಂದ ಆಚರಿಸಿದರು.

‘ಶಾಂತಿ, ಕರುಣೆ ಮತ್ತು ಸಹೋದರತ್ವವು ನಮ್ಮೆಲ್ಲರ ಜೀವನವನ್ನು ಬೆಳಗಲಿ, ಸಮಾಜದಲ್ಲಿ ಸೌಹಾರ್ದ ನೆಲಸಲಿ, ಪ್ರೀತಿ ಸಹಬಾಳ್ವೆಯ ಬದುಕು ಎಲ್ಲರದಾಗಲಿ’ ಎನ್ನುವ ಆಶಯದೊಂದಿಗೆ ನಾನಾ ಸೇವಾ, ಧಾರ್ಮಿಕ ಚಟುವಟಿಕೆಗಳು ನಡೆದವು.

ಹಿರಿಯರು, ಯುವಕರೊಂದಿಗೆ ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಘೋಷಣೆಗಳನ್ನು ಕೂಗುತ್ತಾ ವಾಹನಗಳಲ್ಲಿ ಬಾವುಟಗಳನ್ನು ಹಿಡಿದು ಸಾಗಿದರು. ಬಿರಿಯಾನಿ, ನೀರು ಹಾಗೂ ಒಣ ಹಣ್ಣುಗಳನ್ನು ವಿತರಿಸಿ, ಸೇವಾ ಕಾರ್ಯ ಕೈಗೊಂಡರು.

ಶಿವಾಜಿನಗರ, ಚಾಮರಾಜಪೇಟೆ, ಗಾಂಧಿನಗರ, ಕೆ.ಜಿ. ರಸ್ತೆ, ಕಂಟೋನ್ಮೆಂಟ್ನ ನ್ಯೂ ಬಂಬೂ ಬಜಾರ್, ವಸಂತನಗರ, ಜೆ.ಸಿ. ರಸ್ತೆ, ಆರ್.ಟಿ. ನಗರ, ಗೋರಿಪಾಳ್ಯ, ಪಾದರಾಯನಪುರ, ಪುಲಕೇಶಿನಗರ, ಹೆಬ್ಬಾಳ, ಬನ್ನೇರುಘಟ್ಟ ರಸ್ತೆ, ನಾಯಂಡಹಳ್ಳಿ, ಬಿಸ್ಮಿಲ್ಲಾ ನಗರ, ಕಲಾಸಿಪಾಳ್ಯ, ಸುಲ್ತಾನಪಾಳ್ಯ, ರಹಮತ್ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಮೆರವಣಿಗೆಗಳು ನಡೆದವು.

ಸ್ತಬ್ಧ ಚಿತ್ರಗಳು, ವಾದ್ಯಗಳೊಂದಿಗೆ ಶಿವಾಜಿನಗರ ಕಂಬಲ್ ಪೋಷ್ ದರ್ಗಾಕ್ಕೆ ಮೆರವಣಿಗೆ ಮೂಲಕ ಆಗಮಿಸಿದರು.

ಅಖಿಲ ಕರ್ನಾಟಕ ಮಿಲಾದ್ ಒ ಜುಲೂಸ್ ಎ ರಹ್ಮತ್ ಉಲ್ ಅಲ್ ಅಮೀನ್ ಕಮಿಟಿಯಿಂದ ಬಿಎಸ್ಎ ರಸ್ತೆಯ ಬಿಲಾಲ್ ಮಸೀದಿ ಬಳಿ ಮೆರವಣಿಗೆ ಸಾಗಿತು. ಬಳಿಕ ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಮಸೀದಿ, ದರ್ಗಾಗಳಲ್ಲಿ ಮೊಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶಗಳ ಕುರಿತು ಧರ್ಮಗುರುಗಳ ಉಪನ್ಯಾಸಗಳು ನಡೆದವು.

‘ಇಸ್ಲಾಂ ಧರ್ಮದವರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಈದ್ ಮಿಲಾದ್ ಎಂದು ಆಚರಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ದಿನವನ್ನು ಮೌಲಿದ್ ಆನ್-ನಬಿ ಇಲ್ಲವೇ ಮೌಲಿದ್ ಎಂದೂ ಹೇಳಲಾಗುತ್ತದೆ. 1,500 ವರ್ಷಗಳ ಹಿಂದೆಯೇ ಪ್ರವಾದಿ ಮುಹಮ್ಮದ್ ಅವರು ಸಾರಿದ ಸಂದೇಶದಂತೆಯೇ ಬದುಕುವಂತೆ ಮನವಿ ಮಾಡಲಾಗುತ್ತದೆ’ ಎಂದು ಧರ್ಮಗುರುಗಳು ಪ್ರವಚನದಲ್ಲಿ ತಿಳಿಸಿದರು.

ಹಲವೆಡೆ ಸಂಚಾರ ದಟ್ಟಣೆ

ಬೆಂಗಳೂರಿನ ಹಲವು ಭಾಗಗಳಲ್ಲಿ ಈದ್ ಮಿಲಾದ್ ಮೆರವಣಿಗೆ ಇದ್ದುದರಿಂದ ಸಂಚಾರ ದಟ್ಟಣೆ ಉಂಟಾಯಿತು. ವಾಹನ ಸವಾರರು ಪರದಾಡಿದರು. ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಿದ್ದರಿಂದ ಅಲ್ಲಿಯೂ ದಟ್ಟಣೆ ಉಂಟಾಗಿ ಸಂಚಾರ ವಿಳಂಬವಾಯಿತು. ಹೆಬ್ಬಾಳ ಚಾಮರಾಜಪೇಟೆ ಶಿವಾಜಿನಗರದ ಹಲವು ಕಡೆಗಳಲ್ಲಿ ಸಂಚಾರ ಪೊಲೀಸರು ನಿಯಂತ್ರಣ ಕ್ರಮ ಕೈಗೊಂಡರೂ ಕೆಲವು ಹೊತ್ತು ದಟ್ಟಣೆ ಇತ್ತು. ಪೊಲೀಸರು ಮಾರ್ಗದರ್ಶನ ಮಾಡಿ ವಾಹನ ಸವಾರರು ಪರ್ಯಾಯ ರಸ್ತೆ ಬಳಸುವಂತೆ ಸೂಚಿಸಿದರು. ಅರಮನೆ ಆವರಣದಲ್ಲಿ ಈದ್ ಮಿಲಾದ್ ಅಂತರರಾಷ್ಟ್ರೀಯ ಸಮಾವೇಶ ಇದ್ದುದರಿಂದ ಆ ಮಾರ್ಗದಲ್ಲಿ ಸಂಜೆ ನಂತರ ದಟ್ಟಣೆ ಕಂಡು ಬಂದಿತು. ಮೈಸೂರು ರಸ್ತೆಯ ಕೆಂಗೇರಿ ಬಳಿಯೂ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.